ಸನ್ಮಾರ್ಗ ವಾರ್ತೆ
ಜೂನಿಯರ್ ವಿದ್ಯಾರ್ಥಿಗಳ ಹಲ್ಲೆಯಿಂದಾಗಿ 12ನೇ ತರಗತಿಯ ವಿದ್ಯಾರ್ಥಿ ದಾರುಣವಾಗಿ ಸಾವಿಗೀಡಾದ ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಕುಂಭಕೋಣಂ ಎಂಬಲ್ಲಿಯ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಯಿಂದ ಗಂಭೀರ ಗಾಯಕ್ಕೆ ಒಳಗಾಗಿದ್ದ 12ನೇ ತರಗತಿಯ ವಿದ್ಯಾರ್ಥಿ ಆ ಬಳಿಕ ಸಾವನ್ನಪ್ಪಿದ್ದಾನೆ. ಎರಡು ತರಗತಿಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿತ್ತು. ಆ ಬಳಿಕ ಸೀನಿಯರ್ ವಿದ್ಯಾರ್ಥಿಗೆ ಹಲ್ಲೆ ನಡೆಸಲು ಜೂನಿಯರ್ ವಿದ್ಯಾರ್ಥಿಗಳು ತೀರ್ಮಾನಿಸಿದ್ರು ಎಂದು ತಿಳಿದು ಬಂದಿದೆ.
ಡಿಸೆಂಬರ್ 4ರಂದು ಈ ಘಟನೆ ನಡೆದಿದೆ. 15 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತಲೆಗೆ ಉಂಟಾದ ಏಟಿನಿಂದ ವಿದ್ಯಾರ್ಥಿ ಸಾವಿಗಿಡಾಗಿದ್ದಾನೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವ ಕಾರಣ ಶಸ್ತ್ರ ಚಿಕಿತ್ಸೆ ನಡೆಸಲಾಯಿತಾದರೂ ಪ್ರಯೋಜನಕ್ಕೆ ಬರಲಿಲ್ಲ.
ಬಂಧಿತ ಆರೋಪಿಗಳು ಅಪ್ರಾಪ್ತರಾಗಿರುವುದರಿಂದ ಜುವನೈಲ್ ಹೋಮ್ನಲ್ಲಿ ಇರಿಸಲಾಗಿದೆ.
ಇದೇ ವೇಳೆ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗುತ್ತಿದ್ದು, ಅವರನ್ನು ಹದ್ದು ಬಸ್ತಿನಲ್ಲಿ ಇಡುವುದಕ್ಕೆ ವಾರದಲ್ಲಿ ಎರಡು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ತರಗತಿಯನ್ನು ಇಡಬೇಕು ಎಂದು ಪಿಎಂಕೆ ನಾಯಕ ಅಂಬುಮನಿ ರಾಮದಾಸ್ ಹೇಳಿದ್ದಾರೆ.












