ಭಯೋತ್ಪಾದಕನನ್ನು ನೆಲಕ್ಕುರುಳಿಸಿದ ಈ ಅಹ್ಮದ್ ಅಲ್ ಅಹ್ಮದ್ ಯಾರು?

0
1403

ಸನ್ಮಾರ್ಗ ವಾರ್ತೆ

ಆಸ್ಟ್ರೇಲಿಯಾದಲ್ಲಿ ಯಹೂದಿಯರ ಮೇಲೆ ಬಂದೂಕು ಸಿಡಿಸುತ್ತಿದ್ದ ಭಯೋತ್ಪಾದಕನ ಹೆಡೆಮುರಿ ಕಟ್ಟಿದ ಅಹ್ಮದ್ ಅಲ್ ಅಹ್ಮದ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕುತೂಹಲ ಉಂಟಾಗಿದೆ. ಅವರ ಚರಿತ್ರೆ, ಅವರ ಮೂಲ, ಅವರ ಧರ್ಮ… ಹೀಗೆ ವಿವಿಧ ರೀತಿಯಲ್ಲಿ ಜನರು ಸರ್ಚ್ ಮಾಡಿದ್ದಾರೆ. ಇವರು ಹಣ್ಣಿನಂಗಡಿ ಮಾಲೀಕರಾಗಿದ್ದಾರೆ.

ಇವರು ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಈಗ ಆಸ್ಪತ್ರೆಯಲ್ಲಿದ್ದು ಕೈಗೆ ಮತ್ತು ತೋಳಿಗೆ ಬಿದ್ದ ಗುಂಡುಗಳನ್ನು ತೆರವುಗೊಳಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಇವರು ಸಿರಿಯನ್ ಮೂಲದವರು ಎಂದು ಹೇಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರು ಟ್ರೆಂಡ್ ಆಗಿದ್ದು ಇವರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಭಯೋತ್ಪಾದಕನನ್ನು ಹೆಡ್ ಲಾಕ್ ಮಾಡಿ ಬಂದೂಕು ಕಸಿದು ಆತ ನೆಲಕ್ಕುರುಳುವಂತೆ ಮಾಡಿದ ಇವರು ಆ ಮೂಲಕ ಹಲವು ಯಹೂದ್ಯರ ಪ್ರಾಣವನ್ನು ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಅಮೆರಿಕಾದ ಅಧ್ಯಕ್ಷರಿಂದ ಹಿಡಿದು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೆಗೆ ಎಲ್ಲೆಡೆಯಿಂದ ಇವರಿಗೆ ಮೆಚ್ಚುಗೆ ವ್ಯಕ್ತವಾಗಿದೆ.