ಸನ್ಮಾರ್ಗ ವಾರ್ತೆ
ಒಡಿಸ್ಸಾದ ಅರಣ್ಯ ಮತ್ತು ಹವಾಮಾನ ಇಲಾಖೆಯು ಮಹೇಂದ್ರ ಥಾರ್ ಆಲ್ ಟೆರೇನ್ ವಾಹನವನ್ನು ಖರೀದಿಸಿದ್ದು ವಿವಾದಕ್ಕೆ ಒಳಗಾಗಿದೆ. ಈ ಕಾರಿಗೆ 7 ಕೋಟಿ ರೂಪಾಯಿ ಕೊಟ್ಟು ಈ ಕಾರನ್ನು ಖರೀದಿಸಲಾಗಿದ್ದು ಇದರ ಆಲ್ಟರೇಷನ್‌ಗೆ ಬರೋಬ್ಬರಿ ಐದು ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇದೀಗ ಈ ಖರ್ಚು ವಿವಾದಕ್ಕೆ ಕಾರಣವಾಗಿದ್ದು ತನಿಖೆಗೆ ಆದೇಶಿಸಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಏಳು ಕೋಟಿ 10 ಲಕ್ಷ ರೂಪಾಯಿ ಕೊಟ್ಟು ಮಹೇಂದ್ರ ಥಾರ್ ಖರೀದಿಸಲಾಗಿತ್ತು. ಆದರೆ ಇದರ ಆಲ್ಟ್ರೇಷನ್‌ಗೆ 5 ಕೋಟಿಯನ್ನು ವೆಚ್ಚ ಮಾಡಲಾಗಿದೆ ಎಂಬ ಆರೋಪ ಬಂದಿದೆ. ಇದೀಗ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಮೋಡಿಫಿಕೇಶನ್ ಮಾಡುವ ಮೂಲಕ ವಾಹನದಲ್ಲಿ 21 ಜನರನ್ನು ಕೂರುವಂತೆ ಮಾಡಲಾಗಿದೆ ಮತ್ತು ಅದಕ್ಕಾಗಿ 5 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ ಎಂಬ ವ್ಯಾಖ್ಯಾನವನ್ನು ನೀಡಲಾಗುತ್ತಿದೆ.
ಒಡಿಸ್ಸಾದಲ್ಲಿ 22 ವನ್ಯ ಜೀವಿ ಡಿವಿಜನ್‌ಗಳಲ್ಲಿ 51 ವಾಹನಗಳನ್ನು ಖರೀದಿಸಲಾಗಿದೆ ಎಂದು ವರದಿಯಾಗಿದೆ.












