ನಂಬಿದವರೇ ಕೈಕೊಟ್ಟರು: ಮಡುರೋ ಬಂಧನಕ್ಕೆ ಅವರ ಮಗನ ಪ್ರತಿಕ್ರಿಯೆ

0
585

ಸನ್ಮಾರ್ಗ ವಾರ್ತೆ

ವೆನೆಝುವೇಲಾದ ಅಧ್ಯಕ್ಷ ಮಡುರೋ ಅವರ ಬಂಧನಕ್ಕೆ ಅವರ ಪಕ್ಷದವರೇ ನೆರವಾಗಿರುವ ಸಾಧ್ಯತೆ ದಟ್ಟವಾಗುತ್ತಿದೆ. ಅವರ ಮಗ ನಿಕಲಸ್ ಮಡುರೋ ಗುರೇ ಅವರು ಹಂಚಿಕೊಂಡಿರುವ ವಾಯ್ಸ್ ಮೆಸೇಜೊಂದು ಈ ಬಗೆಗಿನ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ನನ್ನ ಪಕ್ಷದವರೇ ತಂದೆಗೆ ದ್ರೋಹ ಎಸಗಿದ್ದಾರೆ ಎಂದವರು ಆ ವಾಯ್ಸ್ ಮೆಸೇಜಿನಲ್ಲಿ ತಿಳಿಸಿದ್ದಾರೆ.

ದ್ರೋಹಿಗಳು ಯಾರು ಅನ್ನುವುದನ್ನು ಇತಿಹಾಸ ತಿಳಿಸಲಿದೆ. ಇತಿಹಾಸವೇ ಅವರು ಯಾರು ಎಂಬುದನ್ನು ನಮಗೆ ತೋರಿಸಿ ಕೊಡಲಿದೆ ಎಂದು ಗುರೆ ಹೇಳಿದ್ದಾರೆ.

ಬಾಹ್ಯ ಶಕ್ತಿಗಳ ಅಕ್ರಮಣ ತಡೆಯಲು ರಾಷ್ಟ್ರೀಯ ಮತ್ತು ಸೇನಾ ಒಗ್ಗಟ್ಟು ಅಗತ್ಯ ಎಂದು ಅವರು ಹೇಳಿದ್ದಾರೆ.

ಮಡುರೋ ಮತ್ತು ಪತ್ನಿಯನ್ನು ಅಮೇರಿಕಾ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿ ಕರೆದೊಯ್ದಿದೆ. ಅವರ ಮೇಲೆ ಮಾದಕ ವಸ್ತು ಕಳ್ಳ ಸಾಗಾಟದ ಆರೋಪವನ್ನು ಹೊರಿಸಿದೆ. ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ವೆನೆಜುವೇಲಾದ ಸೈನಿಕ ನೆಲೆಗಳ ಮೇಲೂ ಅಮೆರಿಕಾ ದಾಳಿ ನಡೆಸಿದೆ.