ಸನ್ಮಾರ್ಗ ವಾರ್ತೆ
ಸೀರತ್ ವೀಡಿಯೊ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮದೇ Instagram ಮತ್ತು YouTube ಖಾತೆಯಲ್ಲಿ “ಮುಹಮ್ಮದ್ [ಸ] – ಕರುಣೆಯ ದೂತ” ಎಂಬ ವಿಷಯದ ಬಗ್ಗೆ 2.5 ರಿಂದ 3 ನಿಮಿಷಗಳ ವೀಡಿಯೊ ಅಪ್ ಲೋಡ್ ಮಾಡಬೇಕು ಹಾಗೂ ಅಧಿಕೃತ ಪೇಜ್ “seerathcampaign2025” ಜೊತೆ collaborate ಮಾಡಬೇಕು.
ಮಾರ್ಗಸೂಚಿಗಳು
- ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವ ಮೊದಲು ಆನ್ಲೈನ್ನಲ್ಲಿ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ಮಾಡದೇ ಅಪ್ಲೋಡ್ ಮಾಡಿದ ವೀಡಿಯೊಗಳನ್ನು ಅಮಾನ್ಯ (Null & Void) ಎಂದು ಪರಿಗಣಿಸಲಾಗುತ್ತದೆ.
- 1 ಜನವರಿ 2011 ರ ಮೊದಲು ಜನ್ಮ ತಾಳಿದ ಕರ್ನಾಟಕ ರಾಜ್ಯದ ಎಲ್ಲಾ ನಿವಾಸಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
- ಅನುಮತಿಸಿದ ಭಾಷೆಗಳು: ಕನ್ನಡ, ಇಂಗ್ಲಿಷ್, ಉರ್ದು
- ವೀಡಿಯೊ ಅಪ್ಲೋಡ್ ಮಾಡಲು ಕೊನೆಯ ದಿನಾಂಕ: 15 ಜನವರಿ 2026
- ವೀಡಿಯೊ ತಯಾರಿಸುವ ಮೊದಲು, ವಿಷಯವನ್ನು [email protected] ಗೆ ಕಳುಹಿಸಿ ಅನುಮೋದನೆ (Approval) ಪಡೆಯಬೇಕು.
- ಇಮೇಲ್ ಮೂಲಕ ಅನುಮೋದನೆ ಪಡೆಯದೇ ತಯಾರಿಸಿದ ವೀಡಿಯೊಗಳನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.
- ಭಾಗವಹಿಸುವವರು ವಸ್ತ್ರಧಾರಣೆಯ ಶಿಷ್ಟಾಚಾರ (Discipline Dress Code) ಪಾಲಿಸಬೇಕು.
- ಅಪ್ಲೋಡ್ ಮಾಡಿದ ವೀಡಿಯೊಗಳು ಬಹುಮಾನ ವಿತರಣೆಯ ತನಕ ಆನ್ಲೈನ್ನಲ್ಲಿ ಲಭ್ಯವಿರಬೇಕು.
ಮೌಲ್ಯಮಾಪನ ಮಾನದಂಡಗಳು
ವಿಷಯ (Content): -65%
ವಿಷಯದ ಅಧಿಕೃತ, ವಿಷಯ ಮಂಡನೆ, ಪ್ರಸ್ತುತತೆ
ಉಳಿದ 35% ಅಂಕಗಳು ಕೆಳಗಿನ ಅಂಶಗಳಿಗೆ:
ವೀಡಿಯೊಗ್ರಫಿ
ಸ್ಪಷ್ಟತೆ
ವಿನ್ಯಾಸ ಮತ್ತು ಸೃಜನಶೀಲತೆ
ಅಭಿವ್ಯಕ್ತಿ
ಒಟ್ಟಾರೆ ಪ್ರಭಾವ
ವೀಡಿಯೊ ರೀಚ್
ಬಹುಮಾನಗಳು
ಪ್ರಥಮ: ₹25000.00
ದ್ವಿತೀಯ: ₹15000.00
ತೃತೀಯ: ₹10000.00
ಆದರ್ಶವಾದ 50 ವೀಡಿಯೊಗಳಿಗೆ ತಲಾ ₹1,000/-ಸಮಾಧಾನಕರ ಬಹುಮಾನವಿದೆ.
ಬಹುಮಾನ ವಿತರಣಾ ಕಾರ್ಯಕ್ರಮವು ಫೆಬ್ರವರಿ 2026ರ ಮಧ್ಯ ಭಾಗದಲ್ಲಿ ನಡೆಯಲಿದೆ.
ನವೀಕರಣಗಳಿಗಾಗಿ ಅಧಿಕೃತ Instagram @ ಪೇಜ್ seerathcampaign2025 ಅನ್ನು ಫಾಲೋ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 9844 703 567 ಅಥವಾ [email protected] ಗೆ ಮೇಲ್ ಮಾಡಿ.












