ಶ್ರೀನಗರ, ಜು.1: ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370, 35ನೇ ವಿಧಿಯನ್ನು ರದ್ದುಗೊಳಿಸಬೇಕೆಂದು ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ. ಜಮ್ಮುವಿನಲ್ಲಿ ನಡೆದ ಎರಡು ದಿವಸದ ಕೇಂದ್ರ ಸಮಿತಿ ಸಭೆಯಲ್ಲಿ ವಿಹಿಂಪ ದಶಕಗಳಿಂದ ಎತ್ತುತ್ತಾ ಬಂದ ಬೇಡಿಕೆಯನ್ನು ಪುನರುಚ್ಚರಿಸಿದೆ. ಕಾಶ್ಮೀರಿ ಪಂಡಿತ್ಗಳ ಪುನವರ್ಸತಿಗೆ ಅಗತ್ಯ ಕ್ರಮ ಕೈಗೊಳ್ಳಬಹುದಾದರೂ ವಿಶೇಷ ಸ್ಥಾನಮಾನಕ್ಕೆ ನಿಯಂತ್ರಣ ಅಗತ್ಯವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಶಾರದ ಪೀಠಕ್ಕೆ ತೀರ್ಥಯಾತ್ರೆಯನ್ನು ಪುನಃ ಆರಂಭಿಸಬೇಕು. ಲಡಾಕ್ ಮೂಲಕ ಹೋಗುವ ಕೈಲಾಸ-ಮಾನಸ ಸರೋವರ ಯಾತ್ರಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ವಿಹಿಂಪ ಸರಕಾರವನ್ನು ಆಗ್ರಹಿಸಿದೆ.
ವಿಹಿಂಪ ರಾಷ್ಟ್ರೀಯ ಉಪಾಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜರ ನೇತೃತ್ವದಲ್ಲಿ ಸಭೆ ನಡೆದಿದೆ. ಇದೇ ಮೊದಲ ಬಾರಿ ಜಮ್ಮುವಿನಲ್ಲಿ ವಿಹಿಂಪದ ಸಭೆ ನಡೆದಿದೆ.












