ಯೋಗಿ ಆದಿತ್ಯನಾಥ್‍ರ ಆಸ್ಪತ್ರೆ ಭೇಟಿ ವೇಳೆ ಪತ್ರಕರ್ತರನ್ನು ಕೋಣೆಯೊಳಗೆ ಕೂಡಿ ಹಾಕಲಾಯಿತು

0
677

ಲಕ್ನೊ, ಜು.1: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರು ಮೊರದಾಬಾದ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಪತ್ರಕರ್ತರನ್ನು ಕೋಣೆಯೊಳಗೆ ಕೂಡಿ ಹಾಕಲಾಯಿತು. ಮುಖ್ಯಮಂತ್ರಿಯವರಲ್ಲಿ ಪ್ರಶ್ನೆ ಕೇಳದಂತೆ ಮಾಡಲು ತಮ್ಮನ್ನು ಕೋಣೆಯೊಳಗೆ ಕೂಡಿ ಹಾಕಲಾಯಿತು ಎಂದು ಪತ್ರಕರ್ತರು ಆರೋಪಿಸಿದ್ದಾರೆ. ಘಟನೆಯ ಕುರಿತು ಪ್ರಿಯಾಂಕಾ ಗಾಂಧಿ ಸಹಿತ ಹಲವರು ತೀಕ್ಷ್ಣ ಟೀಕೆ ನೀಡಿದ್ದಾರೆ.

ಮುಖ್ಯಮಂತ್ರಿ ಆಸ್ಪತ್ರೆಗೆ ಬಂದಾಗ ಎರಡು ಗಂಟೆ ಕಾಲ ಕೂಡಿ ಹಾಕಲಾಯಿತು ಎಂದು ಪತ್ರಕರ್ತರು ಹೇಳಿದ್ದಾರೆಂದು ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಪತ್ರಕರ್ತರು ಹೊರಗೆ ಹೋಗದಂತೆ ತಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಸಿಂಗ್ ಸಿಬ್ಬಂದಿಯನ್ನು ನೇಮಿಸಿದ್ದರು ಎಂದು ಪತ್ರಕರ್ತರು ಆರೋಪಿಸಿದ್ದಾರೆ. ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಪತ್ರಕರ್ತರನ್ನು ಸರಕಾರ ಬಂಧಿಯಾಗಿಸಿತು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ಜನರ ಸಮಸ್ಯೆಗಳಿಗೆ ಯೋಗಿ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು. ಮುಖ್ಯಮಂತ್ರಿ ಸಂದರ್ಶನದ ವೇಳೆ ಕೆಲವು ಪತ್ರಕರ್ತರು ವಾರ್ಡಿನೊಳಗೆ ಇದ್ದರು. ಅವರನ್ನು ಒಳಗೆ ಬರಬೇಡಿ ಎಂದು ವಿನಂತಿ ಮಾಡಲಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.