ಸಬ್ಸಿಡಿರಹಿತ ಅನಿಲ ಸಿಲಿಂಡರ್ ಬೆಲೆ 100 ರೂಪಾಯಿ ಇಳಿಕೆ

0
691

ಹೊಸದಿಲ್ಲಿ, ಜು.1: ಸಬ್ಸಿಡಿ ರಹಿತ ಅಡುಗೆ ಅನಿಲಕ್ಕೆ ಸೋಮವಾರದಿಂದ 100 ರೂಪಾಯಿ 50 ಪೈಸೆ ಕಡಿಮೆ ಮಾಡಲಾಗಿದೆ. ಈಗ ಸಿಲಿಂಡರ್ ಬೆಲೆ 737 ರೂಪಾಯಿ ಐವತ್ತು ಪೈಸೆಯಾಗಿದ್ದರೆ. ಇಂದಿನಿಂದ ಇದು 637 ರೂಪಾಯಿ 50 ಪೈಸೆ ಆಗಲಿದೆ. ಸಬ್ಸಿಡಿಯ ಸಿಲಿಂಡರ್ ದರ 494.35 ರೂಪಾಯಿಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದ್ದರಿಂದ ಅಡುಗೆ ಅನಿಲ ಸಿಲಿಂಡರ್ ದರ ಕಡಿಮೆಗೊಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.