ಜೊತೆಯಾಗಿ ಆಡಿದ ತಂದೆ ಮಗ: ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿ

0
472

✍️ ಮಿಷಲ್

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಾಗಲಿ ಐಪಿಎಲ್ ನಂಥ ಪ್ರೀಮಿಯರ್ ಲೀಗ್ ಪಂದ್ಯದಲ್ಲಾಗಲಿ ತಂದೆ ಮತ್ತು ಮಗ ಜೊತೆಯಾಗಿ ಆಟ ಆಡಿದ ಇತಿಹಾಸವೇ ಇಲ್ಲ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಸ್ಟೀವ್ ವಾ ಮತ್ತು ಮಾರ್ಕ್ ವಾ ಎಂಬ ಅಣ್ಣತಮ್ಮಂದಿರು ಜೊತೆಯಾಗಿ ಆಟ ಆಡಿದ್ದಾರೆ. ನ್ಯೂಜಿಲ್ಯಾಂಡ್ ತಂಡದಲ್ಲೂ ಅವಳಿ ಜವಳಿ ಗಳಾದ ಹೆಮ್ಮಿಶ್ ಮತ್ತು ಜೇಮ್ಸ್ ಮಾರ್ಷಲ್ ಜೊತೆಯಾಗಿ ಆಡಿದ್ದಾರೆ. ಆದರೆ ಇದೀಗ ಈ ಎಲ್ಲ ದಾಖಲೆಯನ್ನು ಮುರಿಯುವಂತೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ತಂದೆ ಮತ್ತು ಮಗ ಒಂದೇ ತಂಡದಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆಫ್ಘಾನಿಸ್ತಾನದ ಮಾಜಿ ನಾಯಕ ಮೊಹಮ್ಮದ್ ನಬಿ ಮತ್ತು ಅವರ ಮಗ ಹಸನ್ ಇಸಾಕ್ ಅವರು ಹೀಗೆ ಜೊತೆಯಾಗಿ ಆಟವಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ಅಥವಾ BPL ಎಂಬುದು ಭಾರತದ ಐಪಿಎಲ್ ಪಂದ್ಯಾವಳಿಯಂತೆ ನಡೆಯುತ್ತಿದೆ. ಈ ತಂದೆ ಮತ್ತು ಮಗ ಇಬ್ಬರೂ ಜೊತೆಯಾಗಿ ಕ್ರಿಸಿನಲ್ಲಿ ಕಳೆದ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇವರಿಬ್ಬರೂ ನೌಖಾಲಿ ಎಕ್ಸ್ಪ್ರೆಸ್ ತಂಡದ ಪರವಾಗಿ ಆಟವಾಡಿದ್ದಾರೆ. ಢಾಕ ಕ್ಯಾಪಿಟಲ್ ವಿರುದ್ಧ ಇವರು ಆಟವಾಡಿದ್ದು ತನ್ನ 20 ವರ್ಷದ ಮಗನ ಜೊತೆ ಮೊಹಮ್ಮದ್ ನಬಿ ಬ್ಯಾಟಿಂಗ್ ಮಾಡಿದ್ದಾರೆ. ಮಾತ್ರ ಅಲ್ಲ ತನ್ನ ಮಗನಿಗೆ ಮೊಹಮ್ಮದ್ ನಬಿ ಅವರೇ ಪಂದ್ಯ ಆರಂಭಕ್ಕೂ ಮೊದಲು ತನ್ನ ಮಗನಿಗೆ ಕ್ಯಾಪ್ ನೀಡಿ ಅಭಿನಂದಿಸಿದ್ದಾರೆ.

ವಿಶೇಷಯೇನೆಂದರೆ, ತಂದೆಯ ಮುಂದೆ ಈ ಮಗ ಅದ್ಭುತ ಪ್ರದರ್ಶನ ನೀಡಿದ್ದಾರೆ. ನೌಕಾಲಿ ಎಕ್ಸ್ಪ್ರೆಸ್ ಗಾಗಿ ತನ್ನ ಮೊಟ್ಟಮೊದಲ ಪಂದ್ಯದಲ್ಲಿಯೇ 60 ಎಸೆತಗಳಿಂದ ಏಳು ಬೌಂಡರಿ ಮತ್ತು 5 ಸಿಕ್ಸರ್ ಸಹಿತ 92 ರನ್ ಗಳಿಸಿದ್ದಾರೆ. ಪಂದ್ಯದ 14ನೇ ಓವರ್‌ನಲ್ಲಿ ಮೊಹಮ್ಮದ್ ನಬಿ ಬ್ಯಾಟಿಂಗ್ಗಾಗಿ ಕ್ರಿಸಿಗೆ ಆಗಮಿಸಿದರು. ಅದಕ್ಕಿಂತ ಮೊದಲೇ ಮಗ ಹಸನ್ ಕ್ರಿಸಿನಲ್ಲಿ ಇದ್ದರು. ನಾಲ್ಕನೇ ವಿಕೆಟಿಗೆ ಈ ಅಪ್ಪ ಮತ್ತು ಮಗ ಒಟ್ಟಾಗಿ ಐವತ್ಮೂರು ರನ್ ಗಳಿಸಿದರು. ಇದರಲ್ಲಿ ಮಗನ ರನ್ನೇ ಹೆಚ್ಚು. ಮೊಹಮ್ಮದ್ ನಬಿ 13 ಎಸೆತಗಳಿಂದ 17 ರನ್ ಗಳಿಸಿ ಔಟಾದರು. ತಂದೆಯ ಬೆನ್ನಿಗೆ ಮಗನೂ ಔಟಾದರು. ಇವರ ತಂಡ 41 ರನ್ನುಗಳಿಂದ ಜಯಗಳಿಸಿತು.

ಮಗನ ಬ್ಯಾಟಿಂಗ್ ಶೈಲಿಯೂ ತಂದೆಯ ಬ್ಯಾಟಿಂಗನ್ನೇ ಹೊಲುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮೊಹಮ್ಮದ್ ನಬಿ ಫುಲ್ ಶಾಟ್ ಗೆ ಪ್ರಸಿದ್ಧ.ಅದೇ ರೀತಿಯಲ್ಲಿ ಈ ಮಗನೂ ಫುಲ್ ಶಾಟ್ ಆಡಿದ್ದಾರೆ. ಕ್ರಿಸ್ ನಲ್ಲಿ ನಿಲ್ಲುವ ರೀತಿ ಫ್ಲಿಕ್ಸ್ ಡಿಫೆನ್ಸ್ ಎಲ್ಲವೂ ತಂದೆಯನ್ನೇ ಹೋಲತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇದಕ್ಕಿಂತ ಮೊದಲು ಈ ಇಬ್ಬರೂ ಪರಸ್ಪರ ಎದುರಾಳಿ ತಂಡದಲ್ಲಿ ಆರು ಬಾರಿ ಆಟವಾಡಿದ್ದರು. ಕಳೆದ ವರ್ಷ ಮೊಹಮ್ಮದ್ ನೆಬಿ ಅವರ ಎಸೆತಕ್ಕೆ ಮಗ ಹಸನ್ ಸಿಕ್ಸರ್ ಬಾರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ತಂದೆ ಮತ್ತು ಮಗ ಜೊತೆಯಾಗಿ ಒಂದೇ ತಂಡದಲ್ಲಿ ಆಟವಾಡುವ ಮೂಲಕ ಜಾಗತಿಕ ಕ್ರಿಕೆಟ್ ಪ್ರೇಮಿಗಳ ಮಾತಿಗೆ ವಸ್ತುವಾಗಿದ್ದಾರೆ.