ಜೋಪಡಿಯಲ್ಲಿ ಬದುಕುತ್ತಿದ್ದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಜಮಾಅತೆ ಇಸ್ಲಾಮಿ ಹಿಂದ್

0
1204

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ಸಮಾಜ ಸೇವಾ ಘಟಕದ ವತಿಯಿಂದ, ತಾಲೂಕಿನ ಗ್ರಾಮಚಾವಡಿ ಸಮೀಪದ “ಮಲಾರ್‌ ಕೋಡಿ ಸೈಟ್‌” ಎಂಬಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದ ಬಡ ಕುಟುಂಬವೊಂದರ ಜೋಪಡಿಯೊಂದನ್ನು ಸುಸಜ್ಜಿತಗೊಳಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸಮಾಜ ಸೇವಾ ಘಟಕದ ಸದಸ್ಯರಾದ ಮುಹಮ್ಮದ್ ಮುಹ್ಸಿನ್‌ರವರು ಸಂದರ್ಭೋಚಿತ ಉಪದೇಶ ನೀಡಿ, ಸಹಕರಿಸಿದ ದಾನಿಗಳಿಗೆ ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಹಾಜಿ ಅಸ್ಗರಲಿ ಶುಭ ಹಾರೈಸಿದರು. ಮುಹಮ್ಮದ್ ಇಸ್‌ಹಾಕ್‌ ಫರಂಗಿಪೇಟೆ, ಅಬ್ದುಲ್‌ ಕರೀಮ್‌ ಬೆಂಗರೆ, ಶಂಶೀರ್ ಪಿಲಾರ್‌ ಉಪಸ್ಥಿತರಿದ್ದರು.