ಅಮಿತ್ ಶಾ ಮುಂದೆ ಉರಿದೆದ್ದ ಕಾಂಗ್ರೆಸ್ ಮಹಿಳಾ ನಾಯಕಿ-ವೀಡಿಯೊ

0
994

ಹೊಸದಿಲ್ಲಿ, ಜು. 2: ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಜಾರಿಗೊಳಿಸುತ್ತಿರುವ ಅಜೆಂಡವನ್ನು ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯೆ ವಿಪ್ಲವ್ ಠಾಕೂರ್ ತೆರೆದಿಟ್ಟಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಜಮ್ಮುಕಾಶ್ಮೀರದಲ್ಲಿ ಸರಕಾರ ರಚಿಸುವುದನ್ನು ತಡೆಯಲು ರಾಜ್ಯಪಾಲರ ಫ್ಯಾಕ್ಸ್ ಕೆಲಸ ಮಾಡದಂತೆ ಮಾಡಿದ್ದು ಸೇರಿ ಅವರು ಬಲವಾದ ಆರೋಪವನ್ನು ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್‍ಶಾರ ಮೇಲೆ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರ ತಿದ್ದುಪಡಿ ಮಸೂದೆಯ ಕುರಿತು ಭಾಗವಹಿಸಿ ಮಾತಾಡುತ್ತಿದ್ದ ಅವರು ಜಮ್ಮು ಕಾಶ್ಮೀರದ ಜನರ ಬೇಡಿಕೆಗೆ ಬೆಲೆಕೊಡದೆ ಲೋಕಸಭಾ ಚುನಾವಣೆಯ ಜೊತೆ ವಿಧಾನಸಭೆಗೆ ಚುನಾವಣೆ ನಡೆಸಿಲ್ಲ. ಇದು ತಮ್ಮ ಸ್ವಂತ ಅಜೆಂಡಾ ಜಾರಿಗೊಳಿಸುವ ಬಿಜೆಪಿಯ ದುರುದ್ದೇಶವೆಂದು ಠಾಕೂರ್ ಆರೋಪಿಸಿದರು. ಚರ್ಚೆಯಲ್ಲಿ ಭಾಗವಹಿಸಿದ ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್, ದೇಶ ಈಗ ಎರಡು ಕುಟುಂಬಗಳ ಆಳ್ವಿಕೆಯಲ್ಲಿದೆ ಎಂದು ಮೋದಿ ಮತ್ತು ಅಮಿತ್ ಶಾರನ್ನು ವ್ಯಂಗ್ಯವಾಡಿದ್ದರು. ಜಮ್ಮು ಕಾಶ್ಮೀರದಲ್ಲಿ ಮೂರು ಕುಟುಂಬಗಳ ಆಡಳಿತ ನಡೆಯುತ್ತದೆ ಅಮಿತ್ ಶಾ ಆರೋಪಿಸಿದ್ದಕ್ಕೆ ಅದೇ ರೀತಿ ಡೆರೆಕ್ ಒಬ್ರಿಯಾನ್ ತಿರುಗೇಟು ನೀಡಿದರು.