26 ವರ್ಷಗಳ ದಾಂಪತ್ಯಕ್ಕೆ ತೆರೆ: 38 ಬಿಲಿಯನ್ ಅಮೇರಿಕನ್ ಡಾಲರ್ ಮೊತ್ತವನ್ನು ತನ್ನ ಪತ್ನಿಗೆ ಪರಿಹಾರವಾಗಿ ನೀಡಿದ ಅಮೆಜಾನ್ ಸಿಇಓ

0
636

ದೆಹಲಿ: ಅಮೆಜಾನ್ ಸಂಸ್ಥಾಪಕ, ವಿಶ್ವದ ನಂ.ವನ್ ಶ್ರೀಮಂತ ಜೆಫ್ ಬಿಜೋಸ್ ಅವರು ತನ್ನ ಪತ್ನಿ ಮೆಕೆಂಜೀ ಬಿಜೋಸ್ ಅವರಿಗೆ 38 ಬಿಲಿಯನ್ ಅಮೇರಿಕನ್ ಡಾಲರ್ (ಶತಕೋಟಿ) ನೀಡುವ ಮೂಲಕ ವಿಚ್ಛೇದನ ಪಡಕೊಂಡಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಪರಿಹಾರ ಎಂದು ಮಾಧ್ಯಮಗಳು ವರದಿ ಮಾಡಿವೆ. ಇವರು ಕಳೆದ ಇಪ್ಪತ್ತಾರು ವರ್ಷಗಳಿಂದ ಸತಿ ಪತಿಗಳಾಗಿದ್ದರು.

49 ವರ್ಷದ ಮೆಕೆಂಜೀ ಲೇಖಕಿಯಾಗಿದ್ದು ವಿಶ್ವದಲ್ಲೇ 4ನೇ ಅತೀ ಶ್ರೀಮಂತ ಮಹಿಳೆಯಾಗಿದ್ದಾರೆ. ಅಲ್ಲದೆ, ಈಗಾಗಲೇ ತಮ್ಮ ಅರ್ಧದಷ್ಟು ಆಸ್ತಿಯನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಮೆಕೆಂಜಿ ಅವರು 1993ರಲ್ಲಿ ಜೆಫ್ ಅವರನ್ನು ಮದುವೆಯಾಗಿದ್ದರು. ಕಂಪನಿಗಾಗಿ ಶ್ರಮಿಸಿದಲ್ಲಿ ಸಂಸ್ಥೆಯ ಅರ್ಧದಷ್ಟು ಹಣವನ್ನು ನೀಡುವುದಾಗಿ ಮದುವೆ ವೇಳೆ ಜೆಫ್ ಹೇಳಿದ್ದರು.

ಈ ದಂಪತಿಗೆ ಒಟ್ಟು ನಾಲ್ಕು ಮಕ್ಕಲಿದ್ದಾರೆ. ಅವರ ವಿಚ್ಛೇದನ ಪರಿಹಾರ ಹಣ ಇತಿಹಾಸದಲ್ಲೇ ಯಾರೂ ನೀಡಿರದಷ್ಟು ದೊಡ್ಡ ಮೊತ್ತವಾಗಿದೆ. ಅಮೆಜಾನ್‍ ನ ಒಟ್ಟು ಶೇರ್ ನಲ್ಲಿ ಶೇ.25 ರಷ್ಟು ಮೊತ್ತವನ್ನು ಅಂದರೆ 38 ಬಿಲಿಯನ್ ಅಮೇರಿಕನ್ ಡಾಲರ್ ಅನ್ನು ಮೆಕೆಂಜಿ ಅವರು ಪರಿಹಾರ ಮೊತ್ತವಾಗಿ ಪಡೆದಿದ್ದಾರೆ.

ವಿಶೇಷ ಏನೆಂದರೆ, ತಮ್ಮ ಪತ್ನಿಗೆ ಶೇ.25 ಶೇರು ನೀಡಿದ ನಂತರವೂ ಸಹ ಜೆಫ್ ಅವರು ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮುಂದುವರಿದಿದ್ದಾರೆ. ಇವರ ಒಟ್ಟು ಆಸ್ತಿಯ ಮೊತ್ತ ಸುಮಾರು 118 ಬಿಲಿಯನ್ ಅಮೇರಿಕನ್ ಡಾಲರ್ ಆಗಿದೆ ಎಂದು ಹೇಳಲಾಗುತ್ತಿದೆ.