ಕೋಝಿಕ್ಕೋಡ್, ಜು.3: ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನರೇಂದ್ರ ಮೋದಿಯ ಹೆಸರಿನಲ್ಲಿ ಅರ್ಜಿ ಹಾಕಲಾಗಿದೆ. ಚುನಾವಣಾ ಆಯೋಗದ ವೆಬ್ಸೈಟ್ಗೆ ಆನ್ಲೈನ್ ಮೂಲಕ ಇಂತಹದ್ದೊಂದು ಅರ್ಜಿ ಬಂದಿದೆ. ವಯಸ್ಸು ಜನನ ದಿನಾಂಕ ಹೊಂದಿರುವ ಅರ್ಜಿಯಲ್ಲಿ ಬೀದಿಯ ಹೆಸರನ್ನು ಚಾದಂಗಡಿ ಎಂದು ನಮೂದಿಸಲಾಗಿದೆ. ಗ್ರಾಮದ ಹೆಸರು ಗುಜರಾತ್. ಪೋಸ್ಟ್ ಆಫೀಸ್ ಕೋಝಿಕ್ಕೋಡ್.
ಆನ್ಲೈನ್ನಲ್ಲಿ ಸಿಕ್ಕಿದ ಅರ್ಜಿಯನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆಯನ್ನು ತಾಲೂಕು ಕಚೇರಿಗಳು ನಡೆಸುತ್ತವೆ. ಹೀಗೆ ಪರಿಶೀಲನೆ ನಡೆಸುವ ವೇಳೆ ಕೋಝಿಕ್ಕೋಡ್ ತಾಲೂಕು ಕಚೇರಿಯಲ್ಲಿ ಇದು ಗಮನಕ್ಕೆ ಬಂತು. ಇದರಲ್ಲಿರುವ ಫೋನ್ ನಂಬರ್ ಗೆ ಫೋನ್ ಮಾಡಿದಾಗ ಪ್ರತಿಕ್ರಿಯೆ ಸಿಗಲಿಲ್ಲ. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವವರಲ್ಲಿ ಇಂತಹ ನಕಲಿ ಅರ್ಜಿಗಳು ಇರುತ್ತವೆ. ಇದರಲ್ಲಿ ಪ್ರಧಾನಿಯನ್ನು ಅಪಮಾನಿಸುವ ರೀತಿಯ ಅರ್ಜಿಯನ್ನು ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ನಕಲಿ ಹೆಸರು, ವಿಳಾಸ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ತಡೆಯುವ ವ್ಯವಸ್ಥೆ ಇಲ್ಲದ್ದರಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಯಾವುದೇ ಅರ್ಜಿಯನ್ನು ಪರಿಶೀಲಿಸದೆ ಮುಂದೆ ಕಳುಹಿಸಬಾರದೆಂದು ಸೂಚನೆ ಇದ್ದರೂ ಇಂತಹ ಕೆಲಸ ಆಗುತ್ತಿದೆ.












