ಲಂಡನ್, ಜು. 6: ಈಜಿಪ್ಟ್ ನ ಬಾಲಕ ಫರೋವಾ ಎಂದು ಖ್ಯಾತಿ ಪಡೆದಿದ್ದ ಮತ್ತು ಕ್ರಿಸ್ತಪೂರ್ವ 1332-1323ರವರೆಗೆ ಆಡಳಿತ ನಡೆಸಿದ್ದ ಕಿಂಗ್ ತುತ್ ಎಂದು ಕರೆಯಲಾಗುತ್ತಿದ್ದ ತುತಾನ್ ಖಾಮೂನ್ರ ಮೂರ್ತಿ ಈಜಿಪ್ಟ್ ನ ವಿರೋಧದ ನಡುವೆಯೂ 60 ಲಕ್ಷ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಗೆ ಹರಾಜಾಗಿದೆ. ತುತಾನ್ ಖಾಮೂನ್ ತನ್ನ ಹತ್ತನೆ ವರ್ಷದಲ್ಲಿ ರಾಜನಾಗಿ ಹತ್ತೊಂಬತ್ತನೆ ವರ್ಷದಲ್ಲಿ ನಿಧನನಾಗಿದ್ದನು. ಈತನ ಮಮ್ಮಿ 1922ರಲ್ಲಿ ಪತ್ತೆಯಾಗಿತ್ತು.
ಈ ಮಮ್ಮಿಯ ಜೊತೆಗೆ 28.5 ವ್ಯಾಸದ ಕಾರ್ಟಸೈಟ್ (ವಿಶೇಷ ರೀತಿಯ ಬಂಡೆ ಕಲ್ಲು) ತಲೆಯ ರೂಪ ಇತ್ತು. ಇದು 1970ರಲ್ಲಿ ಕೊನಾಕ್ ದೇಗುಲ ಸಮುಚ್ಚಯದಿಂದ ಕದ್ದುಹೋಗಿದ್ದು, ಅದುವೇ ಈ ಮೂರ್ತಿ ಎಂದು ಈಜಿಪ್ಟ್ ವಾದಿಸುತ್ತಿದೆ.
ಇದನ್ನು ತಮಗೆ ಮರಳಿಸಬೇಕು ಎಂದು ಈಜಿಪ್ಟ್ ಅಧಿಕಾರಿಗಳುಬ್ರಿಟಿಷ್ ವಿದೇಶ ಸಚಿವಾಲಯಕ್ಕೆ ಮತ್ತು ಯುನೆಸ್ಕೊಗೆ ದೂರು ನೀಡಿತ್ತು. ಆದರೆ ಅದು ಪುರಸ್ಕøತವಾಗಿಲ್ಲ. ಅಂತಿಮವಾಗಿ 60 ಲಕ್ಷ ಡಾಲರ್ ಸುಮಾರು 41 ಕೋಟಿ ರೂಪಾಯಿಗೆ ಏಲಂಈಗ ಪರಭಾರೆ ಆಗಿದೆ.












