ಹಾಂಕಾಂಗ್, ಜು. 6: ಚೀನ ಸರಕಾರ ಉಯಿಗುರ್ ಮುಸ್ಲಿಮರು ವಾಸವಿರುವ ಸಿಂಜಿಯಾಂಗ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಿಗಾ ಇರಿಸಲಿಕ್ಕಾಗಿ ಆ್ಯಪ್ ತಯಾರಿಸಿದೆ. ಪ್ರವಾಸಿಗರ ಫೋನ್ಗಳನ್ನು ಬಲವಂತದಿಂದ ಪಡೆದು ಫೆಂಗಾಯ್ ಎಂಬ ಆ್ಯಪನ್ನು ಇನ್ಸ್ಟಾಲ್ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪ್ರವಾಸಕ್ಕೆ ಆಗಮಿಸುವವರ ಫೋನ್ ಕರೆಗಳು, ಸಂದೇಶಗಳು , ಫೋನ್ ನಂಬರ್ ಗಳು, ಫೋಟೊಗಳು, ಕ್ಯಾಲಂಡರ್ ಸಹಿತ 73000 ವಿವರಗಳು ಈ ಆ್ಯಪ್ ಮೂಲಕ ಸೋರಿಕೆ ಮಾಡಲಾಗುತ್ತಿದೆ.
ಪವಿತ್ರ ಕುರ್ ಆನ್, ಅರೇಬಿಕ್ ನಿಘಂಟು, ದಲೈಲಾಮರ ಫೋಟೊ, ಅಲ್ಖಾಯಿದ, ಐಸಿಸ್ ಬೆಂಬಲಿಗರ ಸಂದೇಶಗಳು ತೈವಾನ್ ಅನದರ್ ಚೈನಾ ಎಂಬ ಹಾಡು ಹಾಡಿದ ಅನ್ಹೋಲಿ ಗ್ರೂಪ್ ಎಂಬ ಜಪಾನೀಸ್ ಮ್ಯೂಸಿಕ್ ಬ್ಯಾಂಡ್ ಗಾಲ ವಿವರಗಳನ್ನು ಈ ಆ್ಯಪ್ ಮೂಲಕ ಸಂಗ್ರಹಿಸಲಾಗುತ್ತಿದೆ. ಹೀಗೆ ಯಾಕೆ ನೀವು ಆಪ್ ಇನ್ಸ್ಟಾಲ್ ಮಾಡುತ್ತೀರಿ ಎಂದು ಪತ್ರಕರ್ತರು ಕೇಳಿದಾಗ ಚೈನೀಸ್ ಅಧಿಕಾರಿಗಳು ಉತ್ತರಿಸಿಲ್ಲ. 30 ಲಕ್ಷ ಉಯಿಗುರ್ ಮುಸ್ಲಿಂರನ್ನು ಕಾನ್ಸಂಟ್ರೇಶನ್ ಶಿಬಿರದಲ್ಲಿ ಇರಿಸಲಾಗಿದೆ ಎಂದು ಅಮೆರಿಕ ಆರೋಪಿಸಿದೆ.












