ಮೋದಿ ರಾಹುಲ್ ಮುಖಾಮುಖಿ: ವಿಡಿಯೋ ವೈರಲ್

0
640

ಸನ್ಮಾರ್ಗ ವಾರ್ತೆ

ಪಾರ್ಲಿಮೆಂಟ್ ನ ಒಳಗೂ ಮತ್ತು ಹೊರಗೂ ಪರಸ್ಪರ ತೀವ್ರ ವಾಗ್ದಾಳಿ ನಡೆಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಆಪ್ತವಾಗಿ ಮಾತಾಡುವ ಸನ್ನಿವೇಶದ ವಿಡಿಯೋ ಭಾರಿ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಇಬ್ಬರೂ ಪರಸ್ಪರ ಕೈಮುಗಿದು ವಂದನೆಗಳನ್ನು ಸಲ್ಲಿಸುತ್ತಾರೆ ಮತ್ತು ಆ ಬಳಿಕ ಇಬ್ಬರೂ ಕುಶಲೋಪರಿ ವಿಚಾರಿಸುತ್ತಾರೆ . ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಮತ್ತು ಪ್ರಶಂಸೆಗೆ ಪಾತ್ರವಾಗಿದೆ. ಪಾರ್ಲಿಮೆಂಟ್ ನಲ್ಲಿ ಮಹಾತ್ಮ ಜ್ಯೋತಿಬಾಪುಲೆ ಅವರ 200ನೇ ಜನ್ಮದಿನದ ವಾರ್ಷಿಕ ಸನ್ನಿವೇಶದಲ್ಲಿ ಇವರಿಬ್ಬರೂ ಮುಖಾಮುಖಿಯಾಗಿದ್ದು ಈ ಸಂದರ್ಭದ ವಿಡಿಯೋ ಇದಾಗಿದೆ.

ಪಾರ್ಲಿಮೆಂಟಿನ ಹೊರಗೆ ನಿಂತಿದ್ದ ರಾಹುಲ್ ಗಾಂಧಿ ಮತ್ತು ಇನ್ನಿತರ ನಾಯಕರ ಬಳಿಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಕೈಮುಗಿದು ಅಭಿವಂದನೆ ಸಲ್ಲಿಸುತ್ತಾರೆ. ಆ ಬಳಿಕ ರಾಹುಲ್ ಗಾಂಧಿಯವರ ಜೊತೆ ಅನೌಪಚಾರಿಕವಾಗಿ ಮಾತುಕತೆ ನಡೆಸುತ್ತಾರೆ.

ಜ್ಯೋತಿಬಾಪುಲೆ ಅವರನ್ನು ಸ್ಮರಿಸುವ ಸನ್ನಿವೇಶ ಮುಗಿದು ಮರಳುವುದಕ್ಕಿಂತ ಕ್ಷಣದ ಮೊದಲು ಇಬ್ಬರೂ ನಾಯಕರು ಮುಖಾಮುಖಿಯಾದ ಸನ್ನಿವೇಶ ನಡೆದಿದೆ. ಪಾರ್ಲಿಮೆಂಟಿನ ಆವರಣದಲ್ಲಿರುವ ಪುಲೆ ಅವರ ಪುತ್ತಳಿಗೆ ಈ ಇಬ್ಬರು ನಾಯಕರು ಆರ್ಪಿಸಿದರು. ಸ್ಪೀಕರ್ ಓಂ ಬಿರ್ಲಾ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾಜಿ ರಾಜ್ಯಸಭಾ ಡೆಪ್ಯುಟಿ ಚೇರ್ ಮ್ಯಾನ್ ಹರಿವಂಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ ಮುಗಿದು ಓಂ ಬಿರ್ಲಾ ಹತ್ತಿರ ನಿಂತಿದ್ದ ರಾಹುಲ್ ಗಾಂಧಿಯನ್ನು ಮೋದಿ ಕೈ ಮುಗಿದು ಅಭಿನಂದನೆ ಸಲ್ಲಿಸುತ್ತಾರೆ. ಉಳಿದವರಿಗೂ ಅಭಿವಂದನೆ ಸಲ್ಲಿಸಿ, ಆ ಬಳಿಕ ರಾಹುಲ್ ಗಾಂಧಿಯ ಬಳಿ ನಿಂತು ಮಾತಾಡುತ್ತಾರೆ.. ಈ ಮಾತುಕತೆ ಒಂದು ನಿಮಿಷದವರೆಗೆ ಸಾಗುತ್ತದೆ.