ಬಂಗಾಳದಲ್ಲಿ ರಸ್ತೆ ಬದಿ ಸ್ನ್ಯಾಕ್ಸ್ ತಿಂದ ಪ್ರಧಾನಿ ಮೋದಿ: ವ್ಯಾಪಕ ಟ್ರೋಲ್

0
798

✒ ಇಷಲ್

ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಸಣ್ಣ ಅಂಗಡಿ ಒಂದರಲ್ಲಿ ಬಂಗಾಳಿ ಸ್ನಾಕ್ಸ್ ಖರೀದಿಸಿರುವುದು ಭಾರಿ ಟ್ರೋಲ್ ಗೆ ಒಳಗಾಗ್ತಾ ಇದೆ. ಏಪ್ರಿಲ್ 19 ರಂದು ಈ ಘಟನೆ ನಡೆದಿದೆ.

ಏಪ್ರಿಲ್ 19 ರಂದು ಪಶ್ಚಿಮ ಬಂಗಾಳದ ಝಾಗ್ರಾಮ್ ನಲ್ಲಿ ಚುನಾವಣಾ ಪ್ರಚಾರದ ನಂತರ ಪ್ರಧಾನಿ ರಸ್ತೆ ಬದಿಯ ಸಣ್ಣ ಅಂಗಡಿಗೆ ಹೋಗುತ್ತಾರೆ.. ಅಂಗಡಿಯ ಮಾಲಿಕನಲ್ಲಿ ಝಾಲ್ಮುರಿ ಸ್ನಾಕ್ಸ್ ನ ಬಗ್ಗೆ ವಿಚಾರಿಸುತ್ತಾರೆ. ಝಾಲ್ಮುರಿ ಅಂದ್ರೆ ಬಂಗಾಳಿಗಳ ಜನಪ್ರಿಯ ರಸ್ತೆ ಬದಿ ತಿಂಡಿ. ಇದನ್ನು ಪಪ್ಡ್ ರೈಸ್ ಎಂದು ಹೇಳುತ್ತಾರೆ. ಸುಟ್ಟ ಮಸಾಲೆ, ಈರುಳ್ಳಿ, ಟೊಮೇಟೊ, ಚಿಲ್ಲಿ, ಸೇವ್ ಮುಂತಾದವುಗಳನ್ನು ಮಿಶ್ರಣ ಮಾಡಿ ತಯಾರಿಸುವ ಸ್ಪೈಸಿ ಸ್ನ್ಯಾಕ್.

ವಿಶೇಷ ಏನೆಂದರೆ ಈ ದೃಶ್ಯದಲ್ಲಿ ನರೇಂದ್ರ ಮೋದಿಯವರು ಕೇಸರಿ ಶಾಲಿನ ಬದಲು ಕೆಂಪು ಶಾಲು ಧರಿಸಿದಾರೆ. ಕ್ಯಾಶ್ ಲೆಸ್ ನ ಬಗ್ಗೆ ಮಾತಾಡುವ ಪ್ರಧಾನಿಯವರು ಇಲ್ಲಿ ಕ್ಯಾಶ್ ನೀಡುತ್ತಾರೆ. ಅಲ್ಲದೆ ಈ ಅಂಗಡಿಯಲ್ಲಿ ಕ್ಯಾಶ್ ಲೆಸ್ ಪೇ ಮಾಡುವುದಕ್ಕೆ ಬೇಕಾದ ಯಾವುದೇ ಸ್ಕ್ಯಾನರ್ ಇಲ್ಲ. ನೀವು ಅಂಗಡಿಯನ್ನು ನೋಡಿದ್ರೆ ಎಲ್ಲ ಭರಣಿಗಳೂ ಸಂಪೂರ್ಣ ತುಂಬಿಕೊಂಡಿವೆ. ಅವುಗಳಿಂದ ಏನು ಖಾಲಿಯಾಗಿಲ್ಲ. ಅಂಗಡಿಯಲ್ಲಿ ಸಾಮಾನುಗಳು ತುಂಬಿ ತುಳುಕ್ತಾ ಇವೆ. ಖುದ್ದು ಪ್ರಧಾನಿ ಬಂದ್ರು ಅಂಗಡಿಯ ಮಾಲಕ ಕುಳಿತೆ ಇದ್ದಾನೆ ಮತ್ತು ಆತನ ಮಾತಿನಲ್ಲಿ ಯಾವುದೇ ಅಚ್ಚರಿ ಕಾಣಿಸ್ತಾ ಇಲ್ಲ. ಪ್ರಧಾನಿ ಕಿಸೆಯಿಂದ 10 ರೂಪಾಯಿಯ ನೋಟು ತೆಗೆದು ಕೊಡುವುದು ಮತ್ತು ಆತ ಬೇಡ ಎಂದು ಹೇಳುವುದು ಮತ್ತು ಕಣ್ಣಿಗೆ ಒತ್ತಿಕೊಂಡು ಹಣವನ್ನು ಪಡಕೊಳ್ಳುವುದರಲ್ಲಿ ಅಚ್ಚರಿಯ ಭಾವ ಏನೂ ಇಲ್ಲ. ಇಷ್ಟೆಲ್ಲ ನಡೆದರೂ ಆತ ಕುಳಿತೇ ಇದ್ದಾನೆ. ಆ ಬಳಿಕ ಪ್ರಧಾನಿ ಅದನ್ನು ಅಲ್ಲೇ ನೆರೆದಿರುವವರ ಕೈಗೆ ಹಾಕ್ತಾರೆ. ಓರ್ವ ಮಹಿಳೆ ಅಂತೂ ಇದು ಪ್ರಸಾದ ಎಂದು ಸ್ವೀಕರಿಸಿ ಕಣ್ಣಿಗೆ ಒತ್ತಿಕೊಳ್ಳುತ್ತಾರೆ. ಅವರ ಹತ್ತಿರ ಇದ್ದದ್ದು ಮಹಿಳೆಯರೇ ಮತ್ತು ಮಕ್ಕಳು.

ಇದು ಮೊದಲೇ ಚಿತ್ರಕಥೆ ರಚಿಸಿದ ಸ್ಕ್ರಿಪ್ಟೆಡ್ ಕಾರ್ಯಕ್ರಮ ಎಂದು ಸೋಶಿಯಲ್ ಮೀಡಿಯಾ ಟ್ರೋಲ್ ಮಾಡ್ತಾ ಇದೆ. ಅಂಗಡಿ ಎಂದ ಮೇಲೆ ಅದರ ಎಲ್ಲಾ ಭರಣಿಗಳು ಸಂಪೂರ್ಣ ತುಂಬಿಕೊಂಡಿರುವುದಕ್ಕೆ ಸಾಧ್ಯವೇ ಇಲ್ಲ. ಖರೀದಿ ವ್ಯವಹಾರ ನಡೆಯುತ್ತಿರುವ ಅಂಗಡಿಯೊಂದು ಸಂಪೂರ್ಣ ಸಾಮಾನುಗಳಿಂದ ತುಂಬಿಕೊಂಡಿರುವುದಿಲ್ಲ. ಭರಣಿಗಳು ತುಂಬಿಕೊಂಡಿರುವುದಿಲ್ಲ. ಆದ್ದರಿಂದಲೇ ಪ್ರಧಾನಿಗಾಗಿಯೇ ಈ ಅಂಗಡಿಯನ್ನು ತೆರೆಯಲಾಗಿದೆ ಎಂದೇ ಗೊತ್ತಾಗುತ್ತದೆ. ಪ್ರಧಾನಿ ಬರುವುದನ್ನು ಈ ಮಾಲಕನಿಗೆ ಮೊದಲೇ ತಿಳಿಸಲಾಗಿದೆ. ಅಂಗಡಿಯ ಎಲ್ಲಾ ಸಾಮಾನುಗಳನ್ನು ಸಂಪೂರ್ಣವಾಗಿ ತುಂಬಲಾಗಿದೆ. ನಾಲ್ಕು ಕಡೆ ಕ್ಯಾಮರಾ ಮ್ಯಾನ್ಗಳನ್ನು ನಿಲ್ಲಿಸಲಾಗಿದೆ. ಕೇಸರಿ ಶಾಲನ್ನು ಕೈ ಬಿಟ್ಟು ಕೆಂಪು ಶಾಲನ್ನು ಧರಿಸಿದ್ದಾರೆ. ಅವರೇ ಒತ್ತುಕೊಟ್ಟು ಪ್ರಚಾರ ಮಾಡುವ ಕ್ಯಾಶ್ ಲೆಸ್ ಗೆ ತಿಲಾಂಜಲಿ ಹಾಕಿದ್ದಾರೆ. ಈ ಅಂಗಡಿಯಲ್ಲಿ ಕ್ಯಾಶ್ ಲೆಸ್ ಪೇ ಮಾಡುವುದಕ್ಕೆ ಬೇಕಾದ ಸ್ಕ್ಯಾನರ್ ಕಾಣಿಸುತ್ತಿಲ್ಲ. ಎಲ್ಲಿಯವರೆಗೆ ಅಂದರೆ ಮಾಲಕ ಪ್ರಧಾನಿ ಬಂದರೂ ಏಳುವುದಿಲ್ಲ. ಅಂದರೆ ಆತನಿಗೆ ಮೊದಲೇ ಹೀಗೆಯೇ ಮಾಡಬೇಕು ಎಂದು ತಿಳಿಸಲಾಗಿದೆ ಅಲ್ಲದೆ ಮಹಿಳಾ ಮೀಸಲಾತಿ ಮಸೂದೆಗೆ ಆಗಿರುವ ಸೋಲನ್ನು ನೆನಪಿಸುವ ಉದ್ದೇಶದಿಂದ ಮಹಿಳೆಯರನ್ನೇ ಕರೆತಂದು ಸುತ್ತಮುತ್ತ ನಿಲ್ಲಿಸಿದಂತೆ ಕಾಣಿಸುತ್ತಿದೆ. ಇದು ಮೊದಲೇ ಚಿತ್ರಕಥೆ ರಚಿಸಲಾದ ಕಾರ್ಯಕ್ರಮ ಅನ್ನುವುದು ಇದರಿಂದಲೂ ಗೊತ್ತಾಗುತ್ತದೆ.

ಅಂತೂ , ಝಾಲ್ಮುರಿ ತಿಂದ ಪ್ರಧಾನಿ ಮತ್ತೊಮ್ಮೆ ತನ್ನ ನಾಟಕದ ವರ್ತನೆಗಾಗಿ ದೇಶದ ಮುಂದೆ ಸಾರ್ವತ್ರಿಕ ನಗುವಿಗೆ ಕಾರಣವಾಗಿದ್ದಾರೆ.