ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸದಂತೆ ಬೆದರಿಕೆ: ತ್ರಿಪುರ ಪಂಚಾಯತ್ ಚುನಾವಣೆಯಲ್ಲಿ ಶೇ.86 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ

0
622

ಅಗರ್ತಲ, ಜು. 13: ತ್ರಿಪುರದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಶೇ. 86ರಷ್ಟು ಸೀಟುಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಒಟ್ಟು 6,111 ಗ್ರಾಮ ಪಂಚಾಯತ್ ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ 5, 278 ಸೀಟು ಬಿಜೆಪಿ ಗೆದ್ದಿದೆ. ಪ್ರತಿಸ್ಪರ್ಧಿಯಾದ ಕಾಂಗ್ರೆಸ್‍ಗೆ ಶೇ. 10 ಮತ್ತು ಶೇ. 4ರಷ್ಟು ಸ್ಥಾನಗಳನ್ನು ಗಳಿಸಿದೆ. ಧಲೈ ಜಿಲ್ಲೆಯ 393 ಗ್ರಾಮ ಪಂಚಾಯತ್ ಸೀಟುಗಳಲ್ಲಿ ಮೂರರಲ್ಲಿ ಮಾತ್ರ ಸ್ಪರ್ಧೆ ನಡೆದಿತ್ತು. ಉಳಿದೆಡೆ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಜಿಲ್ಲಾ ಪರಿಷತ್ ತಾಲೂಕು ಪಂಚಾಯತ್‍ಗಳಲ್ಲಿ ಇಲ್ಲಿ ಅವಿರೋಧ ಆಯ್ಕೆಯಾಗಿದೆ. ಬಿಜೆಪಿ ಗೂಂಡಾಗಳು ನಾಮಪತ್ರ ಸಲ್ಲಿಸಲು ಬಿಡಲಿಲ್ಲ ಎಂದು ಸಿಪಿಎಂ ಆರೋಪಿಸಿದೆ.

ನಾಮಪತ್ರ ಸಲ್ಲಿಸುವ ದಿನದಂದು ಬಿಜೆಪಿಯ ಗೂಂಡಾಗಳು ಚುನಾವಣಾ ಕಚೇರಿಯ ಮುಂದೆ ಇರುತ್ತಿದ್ದರು. ಅವರು ಬೆದರಿಕೆ ಹಾಕಿದರು. ಪೊಲೀಸರು ಕೇವಲ ಮೂಕ ಪ್ರೇಕ್ಷಕರಾಗಿದ್ದರು ಎಂದು ಸಿಪಿಎಂ ದೂರಿದೆ.