ವಾಷಿಂಗ್ಟನ್, ಜು. 15: ಅಮೆರಿಕನ್ ಕಾಂಗ್ರೆಸ್ನ ಕೆಲವು ಮಹಿಳಾ ಸದಸ್ಯರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪಿಸಿ ಟ್ವೀಟ್ ಮಾಡಿದ್ದಾರೆ. ನ್ಯೂಯಾರ್ಕ್ನ ಕಾಂಗ್ರೆಸ್ ಸದಸ್ಯೆ ಅಲಕ್ಸಾಂಡ್ರಿಯ ಒಕೆಷ್ಯಾ ಕೊಟ್ರ್ಸ್, ಮಿನೊಸೊಟದ ಇಲ್ಹಾನ್ ಒಮರ್, ಅಯನ್ನ ಪ್ರಸ್ಲಿ, ರಾಶಿ ತಲೈಬ್ರನ್ನು ಟ್ರಂಪ್ ಟೀಕಿಸಿದರು.
ಇವರ ಹೆಸರನ್ನು ಎತ್ತದಿದ್ದರೂ ಅವರು ಈ ಮಹಿಳೆಯರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆನ್ನುವುದು ಸ್ಪಷ್ಟವಾಗಿದೆ. ಪ್ರಗತಿಪರ ಕಾಂಗ್ರೆಸ್ ಮಹಿಳೆಯರು ಎಂದು ಹೇಳುವವರು ಅವರ ದೇಶಕ್ಕೆ ಮರಳಿ ಹೋಗಬೇಕು. ಅವರ ದೇಶ ಅತ್ಯಂತ ದೊಡ್ಡ ದುರಂತ ಮತ್ತು ಕೆಟ್ಟ ಭ್ರಷ್ಟಾಚಾರ ತುಂಬಿದ ದೇಶವಾಗಿದೆ. ಆದರೆ ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಮತ್ತು ಶಕ್ತಿಶಾಲಿ ದೇಶ ಅಮೆರಿಕ ಆಗಿದೆ. ಸರಕಾರ ಹೇಗೆ ಕೆಲಸ ಮಾಡಬೇಕೆಂದು ಸರಕಾರಕ್ಕೂ ಗೊತ್ತಿದೆ ಎಂದು ಟ್ರಂಪ್ ಟ್ವೀಟ್ ಮಾಡಿದರು. ಯಾಕೆ ಅವರು ಅವರ ದೇಶಕ್ಕೆ ಮರಳಿ ಅಲ್ಲಿನ ಅಪರಾಧಗಳನ್ನು ತಡೆಯುತ್ತಿಲ್ಲ ಎಂದು ಟ್ರಂಪ್ ವ್ಯಂಗ್ಯವಾಡಿದರು. ರವಿವಾರ ಟ್ರಂಪ್ ಟ್ವಿಟರ್ನಲ್ಲಿ ಜನಾಂಗೀಯ ದ್ವೇಷ ತುಂಬಿದ ಆಕ್ಷೇಪವನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಟ್ರಂಪ್ರ ಜನಾಂಗೀಯ ದ್ವೇಷ ಮತ್ತು ಮುಸ್ಲಿಂ ವಲಸೆಗಾರರ ವಿರುದ್ಧ ನಿಲುವನ್ನು ಈ ಕಾಂಗ್ರೆಸ್ ಮಹಿಳೆಯರು ಪ್ರಶ್ನಿಸಿ ರಂಗಪ್ರವೇಶಿಸಿದ್ದರು. ಟ್ರಂಪ್ರ ಇಸ್ರೇಲ್ ಸಂಬಂಧವನ್ನು ಕೂಡ ಇವರು ಪ್ರಶ್ನಿಸಿದ್ದರು. ಇದು ಟ್ರಂಪ್ರ ಕೋಪಕ್ಕೆ ಕಾರಣವಾಗಿದೆ.












