ಅಣು ಚರ್ಚೆ : ಟ್ರಂಪ್‍ರ ಆಹ್ವಾನ ತಿರಸ್ಕರಿಸಿದ ಇರಾನ್; ಅಲ್ಜೀರಿಯ, ಲಿಬಿಯ, ಸುಡಾನ್‍, ಯಮನ್ ಸ್ಥಿತಿಗೆ ಯಾರು ಹೊಣೆ?

0
725

ಟೆಹ್ರಾನ್, ಜು. 17: ಬಾಲಿಸ್ಟಿಕ್ ಮಿಸೈಲ್ ಪರೀಕ್ಷೆ ಇಲ್ಲದಾಗಿಸುವ ಉದ್ದೇಶದಿಂದ ಅಣು ಚರ್ಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದು ಇರಾನ್ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಇರಾನ್ ಮೇಲೆ ವಿಧಿಸಿದ ದಿಗ್ಬಂಧನ ತೆರವು ಗೊಳಿಸಿದ ಬಳಿಕ ಚರ್ಚೆ ಆಗಬಹುದು. ಅದಕ್ಕಿಂತ ಮುಂಚೆ ಯಾವ ಚರ್ಚೆಯೂ ಇಲ್ಲ ಎಂದು ವಿದೇಶ ಸಚಿವ ಜವಾದ್ ಸಾರಿಫ್ ಎನ್‍ಬಿಎಸ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಗಲ್ಫ್ ಮಿತ್ರ ದೇಶಗಳಿಗೆ ಆಯುಧಗಳನ್ನು ಕೊಟ್ಟು ಮಧ್ಯಪ್ರಾಚ್ಯವನ್ನು ಸುಟ್ಟುಹಾಕಲು ಟ್ರಂಪ್ ಯೋಜನೆ ರೂಪಿಸಿದ್ದಾರೆ ಎಂದು ಇರಾನ್ ವಿದೇಶ ಸಚಿವ ಆರೋಪಿಸಿದರು. ಯಮನ್‍ನಲ್ಲಿ ಬಾಂಬು ಹಾಕುವುದು ಯಾರು? ಬಹ್ರೈನ್‍ಗೆ ಅತಿಕ್ರಮಣ ನಡೆಸಿದ್ದು ಯಾರು? ಬೇರೊಂದು ದೇಶದ ಪ್ರಧಾನಿಯನ್ನು ರಾಜಕೀಯ ಕೈದಿಯನ್ನಾಗಿಸಿದ್ದು ಯಾರು? ಅಲ್ಜೀರಿಯ ಮತ್ತು ಲಿಬಿಯ, ಸುಡಾನ್‍ಗಳಲ್ಲಿ ಯಾರು ಕ್ಷೋಭೆ ಹಟ್ಟುಹಾಕಿದ್ದು, ಆಗಲೂ ಇರಾನ್ ಮೇಲೆ ನೀವು ಬೆರಳು ಎತ್ತುತ್ತಿದ್ದೀರಾ ಎಂದು ವಿದೇಶ ಸಚಿವ ಸಾರಿಫ್ ಪ್ರಶ್ನಿಸಿದರು. ಅಮೆರಿಕದೊಂದಿಗೆ ಯುದ್ಧವನ್ನು ನಾವು ಬಯಸಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿತು.