ವಿಸಿಟಿಂಗ್ ವೀಸಾದಲ್ಲಿ ಬರುವವರಿಗೆ ರಿಟರ್ನ್ ಟಿಕೆಟ್ ಇರಬೇಕು- ಒಮನ್

0
591

ಮಸ್ಕತ್, ಜು. 17: ವಿಸಿಟಿಂಗ್ ವೀಸಾದಲ್ಲಿ ಬರುವವರಲ್ಲಿ ರಿಟರ್ನ್ ಟಿಕೆಟ್ ಕೂಡ ಇರಬೇಕೆ೦ದು ಒಮನ್ ಏರ್ ತಿಳಿಸಿದೆ. ಕೆಲವು ಟ್ರಾವೆಲ್ ಏಜೆನ್ಸಿಗಳು ವನ್‍ವೆ ಟಿಕೆಟ್ ಮಾತ್ರ ನೀಡುತ್ತದೆ. ಅಥವಾ ಮರಳಿ ಬರಲು ಬೇರೆ ವಿಮಾನ ಕಂಪೆನಿಯ ಟಿಕೆಟ್ ತೆಗೆದು ಕೊಡುತ್ತಿದೆ. ಮರಳಿ ಬರುವ ಟಿಕೆಟನ್ನು ವಿಸಿಟಿಂಗ್ ಹೋದ ವ್ಯಕ್ತಿ ಹೋಗಿ ತಲುಪಿದ ಬಳಿಕ ಕ್ಯಾನ್ಸಲ್ ಮಾಡುತ್ತಿದೆ. ಹೀಗೆ ಕ್ಯಾನ್ಸಲ್ ಮಾಡುವುದರಿಂದ ಒಮನ್ ಏರ್ ದೊಡ್ಡ ಮೊತ್ತವನ್ನು ದಂಡ ನೀಡಬೇಕಾಗುತ್ತದೆ.

ಇದನ್ನೆಲ್ಲ ಮುಂದಿಟ್ಟು ಹೊಸ ನಿರ್ದೇಶನ ಹೊರಡಿಸಲಾಗಿದೆ. ಇನ್ನು ಯಾವುದಾದರೂ ಸ್ಥಳಕ್ಕೆ ಒಮನ್ ಏರ್‍ನಲ್ಲಿ ಹೋದವರು ರಿಟರ್ನ್ ಟಿಕೆಟ್ ಹೊಂದಿರಬೇಕು. ಒಂದೇ ಕಡೆಯ ಟಿಕೆಟು ಅಥವಾ ಎರಡು ವಿಮಾನದಲ್ಲಿ ಟಿಕೆಟ್ ಮಾನ್ಯ ಆಗದು. ಇಂತಹ ಟಿಕೆಟ್ ಬುಕ್ಕಿಂಗ್‍ಗಳನ್ನು ಮುನ್ಸೂಚನೆ ನೀಡದೆ ರದ್ದುಪಡಿಸಲಾಗುವುದು ಎಂದು ಒಮನ್ ಏರ್ ತಿಳಿಸಿದೆ.