ವಿಶಿಷ್ಟ ವೈದ್ಯ ಪದ್ಧತಿ – ಹೋಮಿಯೋಪತಿ

0
2698

ಡಾ| ಅಲ್‍ಫ್ರೀಡಾ ಲವಿನ ಪಿಂಟೊ
BHMS MS (C & P)
ಹೋಮಿಯೋಪತಿ ತಜ್ಞರು, ಮಂಗಳೂರು
(ಫೋನ್: 9449300306)

ಪ್ರಪಂಚದ ಎರಡನೇ ದೊಡ್ಡ ವೈದ್ಯ ಪದ್ಧತಿಯಾಗಿರುವ ಹೋಮಿಯೋಪತಿ ಒಂದು ವಿಶಿಷ್ಟ, ನಾಜೂಕು, ಸಂಪೂರ್ಣ ಚಿಕಿತ್ಸಾ ಪದ್ಧತಿ ಯಾಗಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಇದು ಸೂಕ್ತವಾಗಿದೆ. ಇಲ್ಲಿ ಮನುಷ್ಯನನ್ನು ಒಂದು ವ್ಯಕ್ತಿಯ ನ್ನಾಗಿ ಕೇಂದ್ರೀಕೃತಗೊಳಿಸಿ, ದೈಹಿಕ ಹಾಗೂ ಭಾವನಾತ್ಮಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಉತ್ತಮವಾದಂತಹ ಚಿಕಿತ್ಸೆ ನೀಡಲಾಗುತ್ತದೆ.

ಹೋಮಿಯೋಪತಿ ವೈದ್ಯ ಪದ್ಧತಿಯಿಂದಾಗುವ ಪ್ರಯೋಜನ ಅಗಾಧವಾಗಿದೆ. ಈ ಚಿಕಿತ್ಸಾ ವಿಧಾನವು ಬಲು ಸರಳ, ಸುಲಭ ಹಾಗೂ ಪರಿಣಾಮಕಾರಿಯಾಗಿದೆ. ಮಾತ್ರವಲ್ಲದೆ ಇದು ಎಲ್ಲಾ ವರ್ಗದ ಜನರ ಕೈಗೆಟಕುವಂತಹದಾಗಿದೆ.

ಹೋಮಿಯೋ ಪತಿ ಔಷಧಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲವೆಂಬುದು ಪ್ರಚಲಿತವಾಗಿದೆ. ಹಾಗೂ ಇದರಿಂದ ರೋಗಕ್ಕೆ ಚಿಕಿತ್ಸೆ ದೊರಕು ವುದರ ಜೊತೆಗೆ ಆರೋಗ್ಯವಂತ ಜೀವನದ ಗುಣಮಟ್ಟ ವೃದ್ಧಿಯಾಗುತ್ತದೆ.

ಸರಿ ಸುಮಾರು 200 ವರ್ಷಗಳಿಂದ ಪ್ರಪಂಚದಾದ್ಯಂತ ಜನರು ಹೋಮಿಯೋಪತಿ ಪದ್ಧತಿಯ ಲಾಭ ಪಡೆಯುತ್ತಿದ್ದಾರೆ. ಓರ್ವ ಆಲೋಪತಿ ವೈದ್ಯರಾಗಿದ್ದ ಜರ್ಮನಿಯ ಡಾ. ಸ್ಯಾಮ್ಯುವೆಲ್ ಹ್ಯಾನಿಮನ್ನರು 1796ರಲ್ಲಿ ತಾವು ಪಾಲಿಸುತ್ತಿದ್ದ ವೈದ್ಯ ಪದ್ಧತಿಯನ್ನು ಬಿಟ್ಟು ಈ ವಿಶಿಷ್ಟ ವೈದ್ಯ ಪದ್ಧತಿಗೆ ವೈಜ್ಞಾನಿಕ ಹಾಗೂ ಸೈದ್ಧಾಂತಿಕ ತಳಹದಿ ರೂಪಿಸಿದರು.

Similia Similibus Curantur ಅಥವಾ `ಅನುರೂಪತಾ ನಿಯಮ’ ಎಂಬ ಸಿದ್ಧಾಂತದ ಮೇಲೆ ಈ ಪದ್ಧತಿ ರೂಪುಗೊಂಡಿದೆ. ಹೋಮಿಯೋಪತಿ ಔಷಧಗಳು ನಿಸರ್ಗದಲ್ಲಿ ದೊರಕುವ ನೈಸರ್ಗಿಕ ವಸ್ತುಗಳಲ್ಲಿನ ಒಳ್ಳೆಯ ಸತ್ವಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಪೆÇಟೆಂಟಾಯ್ಸೇಶನ್ ಎಂಬ ವಿಶಿಷ್ಟ ವಿಧಾನ ದನ್ವಯ ಈ ಔಷಧಗಳನ್ನು ತಯಾರಿಸುವುದರಿಂದ, ಔಷಧೀಯ ಕಣವಿಲ್ಲದಿದ್ದರೂ, ಗುಣ ಮಾತ್ರ ಕಾಯ್ದಿರಿಸಲಾಗುತ್ತದೆ. ಅಂತಹ ನೈಸರ್ಗಿಕ ವಸ್ತು ಆರೋಗ್ಯವಂತರಲ್ಲಿ ನೀಡಿದಾಗ ಯಾವ ಗುಣಲಕ್ಷಣ ಅಥವಾ ಬದಲಾವಣೆ ಉಂಟು ಮಾಡಬಲ್ಲದೋ, ಅಂತಹದೇ ಲಕ್ಷಣವಿರುವ ರೋಗಿಗಳಿಗೆ ಅದೇ ವಸ್ತುವನ್ನು ಔಷಧವನ್ನಾಗಿ ಉಪಯೋಗಿಸಬಹುದು.

ಹೋಮಿಯೋಪತಿ ಔಷಧಗಳು ಸೂಕ್ಷ್ಮವಾಗಿ ದೇಹದೊಳಗೆ ಸೇರಿ, ರೋಗಿಯ ಸ್ವಂತ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸಿ ಆರೋಗ್ಯ ನೀಡುತ್ತವೆ. ಅದೂ ದೇಹಕ್ಕೆ ಯಾವುದೇ ಬಾಧೆಯನ್ನು ಮಾಡದೆ ಆರೋಗ್ಯ ಹಿಂದಿರುಗಿ ಸುತ್ತದೆ. ಹಾಗಾಗಿ ಇದರಲ್ಲಿ ಅಡ್ಡಪರಿಣಾಮಗಳು ಬಹು ವಿರಳ. ಆದುದರಿಂದ ಗರ್ಭಿಣಿ ಸ್ತ್ರೀಯರು, ಮಕ್ಕಳೂ, ವೃದ್ಧರೂ ಮತ್ತು ಸೂಕ್ಷ್ಮ ರೋಗಿಗಳೂ ಇದನ್ನು ನಿರ್ಭಿತಿಯಿಂದ ಸೇವಿಸಬಹುದು.

ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ರೋಗಿಯನ್ನು ಒಂದು ಸಂಪೂರ್ಣ ಜೀವಿಯನ್ನಾಗಿ ಕೇಂದ್ರೀಕೃತಗೊಳಿಸಿ ದೈಹಿಕ ಹಾಗೂ ಮಾನಸಿಕ ಗುಣಲಕ್ಷಣಗಳನ್ನು, ಭಾವನೆಗಳನ್ನು ಪರಿಗಣಿಸಿ, ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ರೋಗಿ ಮುಖ್ಯ, ರೋಗವಲ್ಲ. ಆ ರೋಗಿಯ ಮೂಲಕ ರೋಗವನ್ನು ನೋಡಲಾಗುತ್ತದೆ. ಆದುದರಿಂದ ವೈದ್ಯರು ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವುದು ಅಗತ್ಯ ಮತ್ತು ರೋಗಿ ತನ್ನ ದೈಹಿಕ, ಮಾನಸಿಕ ಹಾಗೂ ಜೀವನ ಶೈಲಿಯ ಕುರಿತು ಸವಿಸ್ತಾರ ಮಾಹಿತಿ, ಏನೂ ಮುಚ್ಚು ಮರೆಯಿಲ್ಲದೆ ತಿಳಿಸುವುದು ತುಂಬಾ ಅಗತ್ಯ. ಅದರ ಆಧಾರದ ಮೇಲೆಯೇ ವೈದ್ಯರು ಸೂಕ್ತವಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಯಾವ ಕಾಯಿಲೆಗಳಿಗೆ ಹೋಮಿಯೋಪತಿ?

ಎಲ್ಲಾ ಪ್ರಕಾರದ ನೈಸರ್ಗಿಕ ಕಾಯಿಲೆಗಳಿಗೆ ಹೋಮಿಯೋಪತಿ ಉತ್ತಮ ಪರಿಹಾರ ನೀಡಬಲ್ಲದು. ವಿವಿಧ ಬಗೆಯ ಜ್ವರಗಳು, ಶೀತ, ಕೆಮ್ಮು, ಗಂಟಲು ನೋವು, ಅಜೀರ್ಣ, ವಾಂತಿ-ಬೇಧಿ, ಹೊಟ್ಟೆನೋವು ಮುಂತಾದ ಅಲ್ಪಕಾಲಿನ ರೋಗಗಳಿಗೆ ಶೀಘ್ರ ಪರಿಹಾರ ನೀಡುವಂತಹ ಪರಿಣಾಮಕಾರಿ ಚಿಕಿತ್ಸೆ ಇದೆ. ಹಾಗೂ ದೀರ್ಘಕಾಲಿಕ ರೋಗಗಳು ಉದಾರಣೆಗೆ ಉಬ್ಬಸ, ವಿವಿಧ ಚರ್ಮ ರೋಗಗಳು- ಎಕ್ಜಿಮಾ, ತುರಿಕೆ, ತೊನ್ನು ಇತ್ಯಾದಿ ಅಲರ್ಜಿ, ಗಂಟುನೋವು, ವಾತ, ಮೂಲವ್ಯಾದಿ, ಕೂದಲು ಉದುರುವಿಕೆ, ಗ್ಯಾಸ್ ಮತ್ತು ಜೀರ್ಣದ ಸಮಸ್ಯೆ, ನರಗಳ ತೊಂದರೆ, ವಿವಿಧ ರೀತಿಯ ತಲೆನೋವು, ಮಕ್ಕಳ ಕಾಯಿಲೆಗಳು, ಹದಿಹರೆಯದವರ ತೊಂದರೆಗಳಾದ ಮೊಡವೆ ಇತ್ಯಾದಿ, ಸ್ತ್ರೀ ರೋಗಗಳಾದ ಮುಟ್ಟಿನ ಸಮಸ್ಯೆಗಳು, ಬಿಳಿ ಮುಟ್ಟು, ಗೆಡ್ಡೆಗಳು ಇತ್ಯಾದಿ ವಿವಿಧ ಲೈಂಗಿಕ ತೊಂದರೆಗಳು, ಬಂಜೆತನ, ಹಾರ್ಮೋನ್‍ಗಳ ಅಸಮತೋಲನ ಇತ್ಯಾದಿಗಳಿಗೆ ಸೂಕ್ತ ಚಿಕಿತ್ಸೆ ಇದೆ. ಮಾತ್ರವಲ್ಲದೆ ಜೀವನ ಶೈಲಿಯ ರೋಗಗಳಾದ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಬೊಜ್ಜು (ಕೊಲೆಸ್ಟ್ರಾಲ್) ಇಂತವುಗಳನ್ನು ನಿಯಂತ್ರಣದಲ್ಲಿಡುವಂತಹ ಚಿಕಿತ್ಸೆ ಕೂಡ ಲಭ್ಯವಿದೆ.

ಗುಣಮುಖವಾಗಲು ಸಾಧ್ಯವಾದ ರೋಗಗಳಿಂದ ಸಂಪೂರ್ಣ ಗುಣಮುಖವಾಗಿ ಅದು ಮರುಕಳಿ ಸದಂತೆಯೂ ಚಿಕಿತ್ಸೆ ನೀಡಬಹುದಾಗಿದೆ. ಸಂಪೂರ್ಣ ಗುಣಮುಖವಾಗದಂತಹ ಕಾಯಿಲೆ ಗಳನ್ನು ನಿಯಂತ್ರಣದಲ್ಲಿಟ್ಟು ಅದರ ಮುಂದು ವರಿಯುವಿಕೆಯನ್ನು ತಡೆಗಟ್ಟ ಬಹುದಾಗಿದೆ.

ಕೆಲವು ವರ್ಷಗಳಿಂದೀಚೆಗೆ ಹೋಮಿಯೋಪತಿ ವೈದ್ಯ ಪದ್ಧತಿ ಬಗ್ಗೆ ಹಲವು ಅಪಪ್ರಚಾರಗಳು ನಡೆಯುತ್ತಲಿವೆ. ಇದರ ಜನ ಪ್ರಿಯತೆಯನ್ನು ಸಹಿಸಲಾಗದ ಕೆಲವು ದೊಡ್ಡ ಔಷಧ ತಯಾರಿಕಾ ಕಂಪೆನಿಗಳು ಹೋಮಿಯೋಪತಿ ಬೆಳೆಯುವುದ ರಿಂದ ತಮಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಕೆಲವು ಪ್ರಸಿದ್ಧ ವ್ಯಕ್ತಿ/ಸಂಸ್ಥೆಗಳನ್ನು ಪೆÇೀಷಿಸಿ ಹೋಮಿಯೋಪತಿ ಬಗ್ಗೆ ತಪ್ಪು ಮಾಹಿತಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಇಂತಹ ಅಪಪ್ರಚಾರಗಳಿಂದ ಹೋಮಿಯೋಪತಿಯ ಜನಪ್ರಿಯತೆಗೆ ಕಿಂಚಿಷ್ಟೂ ಕುತ್ತು ಬಂದಿಲ್ಲ. ಏಕೆಂದರೆ ಇದರಿಂದ ಪ್ರಯೋಜನ ಪಡೆದಿರುವ ಅನೇಕಾನೇಕ ಜನರೇ ಇದರ ಸದ್ಪರಿಣಾಮಗಳಿಗೆ ಸಾಕ್ಷಿಯಾಗಿದ್ದಾರೆ.

ಹೋಮಿಯೋಪತಿ ಪದ್ಧತಿಯಿಂದ ಪ್ರಯೋ ಜನ ಪಡೆಯುವಾಗ ನಾವು ತಿಳಿಯಬೇಕಾಗಿರುವು ದೇನೆಂದರೆ ಇದರಲ್ಲಿ ವೈದ್ಯರು ತಮ್ಮಷ್ಟಕ್ಕೇ ಕಾಯಿಲೆ ಗುಣಪಡಿಸುವುದಿಲ್ಲ. ಅಂದರೆ, ರೋಗಿಯ ಸ್ವಂತ ಶಕ್ತಿ ಉಪಶಮನ ನೀಡುತ್ತದೆ. ಆ ಶಕ್ತಿಯನ್ನು ವೈದ್ಯರು ಔಷಧಗಳ ಸಹಾಯದಿಂದ ಬಲಪಡಿಸುತ್ತಾರೆ. ಹಾಗಾಗಿ ಉತ್ತಮ ಆರೋಗ್ಯ ಪಡೆಯಬಹುದು.