ಸೌದಿಯಲ್ಲಿರುವ ಭಾರತೀಯರ ಗಮನಕ್ಕೆ

0
911

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಕ್ಕೆ ಹೋಗುವಾಗ ಮತ್ತು ಅಲ್ಲಿಂದ ಬರುವ ಪ್ರವಾಸಗಳಲ್ಲಿ ಚಿನ್ನ ಅಮೂಲ್ಯ ಲೋಹಗಳು ರತ್ನಗಳು ಮತ್ತು ಆಭರಣಗಳನ್ನು ಸಾಗಿಸುವುದರ ಮೇಲೆ ಸೌದಿ ಸರ್ಕಾರ ಹೊಸ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಹಣ ವರ್ಗಾವಣೆಯನ್ನು ತಡೆಗಟ್ಟಲು ಕಾನೂನಿನ ಭಾಗವಾಗಿ ಹೊಸ ಕಾರ್ಯನಿರ್ವಾಹಕ ನಿಯಮಗಳನ್ನು ಹೊರಡಿಸಲಾಗಿದೆ. ಅದರಂತೆ ಪ್ರಯಾಣಿಕರು ಸಾಗಿಸಬಹುದಾದ ನಗದು ಮತ್ತು ಚಿನ್ನದ ಮೊತ್ತದ ಮಿತಿಯನ್ನು ಕಡಿಮೆ ಮಾಡಲಾಗಿದೆ.

40,000 ಸೌದಿ ರಿಯಾಲ್ ಗಿಂತ ಹೆಚ್ಚು ಮೌಲ್ಯದ ಚಿನ್ನ ಅಮೂಲ್ಯ ಲೋಹಗಳು ಮತ್ತು ಅಭರಣಗಳನ್ನು ಸಾಗಿಸುವ ಪ್ರಯಾಣಿಕರು ಇದನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಬಹಿರಂಗಪಡಿಸಬೇಕು. ಲಿಖಿತ ಘೋಷಣೆ ಸಲ್ಲಿಸಬೇಕು. ಈ ಹಿಂದೆ ಈ ಮಿತಿ 60,000 ರಿಯಾಲ್ ಗಳಾಗಿತ್ತು.

ಘೋಷಿಸಲಾಗ್ತಾ ಇರುವ ವಸ್ತುಗಳ ಮೌಲ್ಯವನ್ನು ಸಾಬೀತುಪಡಿಸಲು ಖರೀದಿಯಾದ ಸೀದಿಗಳು ಮತ್ತು ಇನ್ವಾಯ್ಸುಗಳನ್ನು ಪ್ರಸ್ತುತಪಡಿಸಬೇಕು. ವಸ್ತುಗಳು ವಾಣಿಜ್ಯ ಉದ್ದೇಶಗಳಿಗಾಗಿ ಎಂದು ಕಸ್ಟಮ್ಸ್ ಅಧಿಕಾರಿಗಳಿಗೆ ಮನವರಿಕೆ ಆದರೆ ಅವರು ಏಕೀಕೃತ ಕಷ್ಟಮ್ಸ್ ಕಾನೂನಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಸೌದಿ ಝಕಾತ್ ತೆರಿಗೆ ಮತ್ತು ಕಷ್ಟಮ್ಸ್ ಪ್ರಾಧಿಕಾರಕ್ಕೆ ಅನುಮಾನಾಸ್ಪದ ಅಥವಾ ಘೋಷಿಸದ ನಗದು ಅಥವಾ ಲೋಹಗಳನ್ನು 72 ಗಂಟೆಗಳವರೆಗೆ ಬಂಧಿಸಲು ಅವುಗಳನ್ನು ಮುಟ್ಟುಗೊಲು ಹಾಕಿಕೊಳ್ಳಲು ದಂಡ ವಿಧಿಸಲು ಹೊಸ ಕಾನೂನು ಅವಕಾಶ ಮಾಡಿಕೊಡುತ್ತದೆ.

ಮೊದಲ ಬಾರಿ ಅಪರಾಧ ಎಸಗಿದವರಿಗೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯದ 10 ರಿಂದ 25 ಶೇಕಡದವರೆಗೆ ದಂಡ ವಿಧಿಸಲಾಗುತ್ತದೆ.. ಪುನರಾವರ್ತಿತ ಅಪರಾಧಿಗಳಿಗೆ 50% ವರೆಗೆ ಗೆ ದಂಡ ವಿಧಿಸಲಾಗುತ್ತದೆ.