ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಬೇಕು: ತರೂರ್

0
387

ಸನ್ಮಾರ್ಗ ವಾರ್ತೆ

ಪಾಸ್ಪೋರ್ಟ್ ಮತ್ತು ಆಧಾರ ಕಾರ್ಡನ್ನು ಭಾರತೀಯ ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸುವಂತೆ ಶಶಿ ತರೂರ್ ಆಗ್ರಹಿಸಿದ್ದಾರೆ. ಇದಕ್ಕಾಗಿ ಕಾನೂನು ತಿದ್ದುಪಡಿ ತರಬೇಕಾಗಿದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಾಸ್ಪೋರ್ಟ್ ಸೇವಾ ದಿವಸ್ ಕುರಿತು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯು , ಜನರಲ್ಲಿ ಸಾಕಷ್ಟು ಗೊಂದಲ ಮತ್ತು ರಾಜಕೀಯ ವಿವಾದವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ. 1967ರ ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 20ರಲ್ಲಿ ಅಪರೂಪದ ಸಂದರ್ಭಗಳಲ್ಲಿ ನಾಗರಿಕರಲ್ಲದವರಿಗೆ ಪಾಸ್ಪೋರ್ಟ್ ಗಳನ್ನು ನೀಡಬಹುದು ಎಂಬ ವಾದವನ್ನು ಸರ್ಕಾರ ಎತ್ತುತ್ತಿದ್ದರೂ ಸಾಮಾನ್ಯ ನಾಗರಿಕರಿಗೆ ಇದು ಪ್ರಾಯೋಗಿಕವಲ್ಲ ಎಂದು ಅವರು ಹೇಳಿದ್ರು . ಕಟುನಿಟ್ಟಾದ ಪೊಲೀಸ್ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆಯ ನಂತರ ನಾಗರಿಕರಿಗೆ ಪಾಸ್ಪೋರ್ಟ್ ಸಿಗುತ್ತದೆ. ಆದರೂ ಅದು ಪೌರತ್ವದ ಪುರಾವೆ ಅಲ್ಲ ಎಂದು ಹೇಳುವುದು ಅಸಂಬದ್ಧ ಕಾನೂನು ವಿರೋಧಬಾಸವಾಗಿದೆ ಎಂದು ತರೂರು ಆರೋಪಿಸಿದ್ದಾರೆ.

ಆಧಾರ್ ಕಾರ್ಡ್ ಪೌರತ್ತದ ಪುರಾವೆ ಎಲ್ಲಾ ಅದು ಗುರುತು ಮತ್ತು ನಿವಾಸದ ಪುರಾವೆ ಎಂದು ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಈ ವಿವಾದವನ್ನು ಕೊನೆಗೊಳಿಸಲು ಸರ್ಕಾರ ತುರ್ತಾಗಿ ಕಾನೂನು ಜಾರಿ ಗೆ ತರಬೇಕು. ಕಾನೂನಿಗೆ ತಿದ್ದುಪಡಿ ತರುವ ಮೂಲಕ ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡುಗಳನ್ನು ಪೌರತ್ವದ ಅಂತಿಮ ಪುರಾವೆಯಾಗಿ ಗುರುತಿಸಬೇಕು.ವಿಶ್ವ ದರ್ಜೆಯ ಬಯೋಮೆಟ್ರಿಕ್ ದಾಖಲೆಗಳನ್ನು ಹೊಂದಿದ್ದರೂ ಅವುಗಳಲ್ಲಿ ಯಾವುದನ್ನು ಪೌರತ್ವದ ಪರಾವೆಯಾಗಿ ಪರಿಗಣಿಸದಿರುವುದು ಭಾರತೀಯ ನಾಗರಿಕರನ್ನು ದೊಡ್ಡ ಆಡಳಿತಾತ್ಮಕ ಸಂದಿಗ್ಧತೆಗೆ ಸಿಲುಕಿಸುತ್ತಿದೆ ಇಂದು ಅವರು ಹೇಳಿದ್ದಾರೆ.