ವಿಶ್ವ ಪ್ರಸಿದ್ಧ ಇಸ್ಲಾಮಿಕ್ ಅಧ್ಯಯನ ತಜ್ಞ, ಜಾನ್ ಎಲ್ ಎಸ್ಪೋಸಿಟೋ ನಿಧನ

0
209

ಸನ್ಮಾರ್ಗ ವಾರ್ತೆ

ವಿಶ್ವ ಪ್ರಸಿದ್ಧ ಇಸ್ಲಾಮಿಕ್ ಅಧ್ಯಯನ ತಜ್ಞ ಮತ್ತು ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮೆರಿಕದ ಜಾನ್ ಎಲ್ ಎಸ್ಪೋಸಿಟೋ ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಇಸ್ಲಾಂ ಮತ್ತು ಮುಸ್ಲಿಂ ಪಾಶ್ಚಿಮಾತ್ಯ ಸಂಬಂಧಗಳ ಅಧ್ಯಯನವನ್ನು ನಡೆಸಿದ್ದ ಎಸ್ಪೋ ಸಿಟೋ, ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಮತ್ತು ಅಂತರ್ಧರ್ಮೀಯ ಸಂವಾದವನ್ನು ಬಲಪಡಿಸಲು ನಿರ್ಣಾಯಕ ಕೊಡುಗೆಗಳನ್ನು ನೀಡಿದ್ದಾರೆ. ಇವರಿಗೆ 86 ವರ್ಷ ವಯಸ್ಸಾಗಿತ್ತು.

ಇವರ ಬರಹಗಳು ಇಸ್ಲಾಂ ಅಂತರ್ಧರ್ಮ ಸಂಬಂಧಗಳು ಮತ್ತು ಸಮಕಾಲಿನ ಮುಸ್ಲಿಂ ಸಮಾಜದ ಜಾಗತಿಕ ಶೈಕ್ಷಣಿಕ ಮತ್ತು ಸಾರ್ವಜನಿಕ ತಿಳುವಳಿಕೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಅವರು ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಇಸ್ಮಾಯಿಲ್ ರಾಝಿ ಅಲ್ ಫಾರೂಕಿ ಅವರ ಮಾರ್ಗದರ್ಶನದಲ್ಲಿ ತಮ್ಮ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ.

ಶರಿಯ: ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದದ್ದು,

ಅರಬ್ ವಸಂತದ ನಂತರ ಇಸ್ಲಾಂ ಮತ್ತು ಪ್ರಜಾಪ್ರಭುತ್ವ.

ಧರ್ಮ ಮತ್ತು ಹಿಂಸೆ: ಇಸ್ಲಾಂ ಪರವಾಗಿ ಮಾತನಾಡುವವರು ಮುಂತಾದವುಗಳು ಅವರ ಪ್ರಮುಖ ಕೃತಿಗಳಾಗಿವೆ.

ವಾಟ್ ಎ ಎವರಿ ವನ್ ನೀಡ್ಸ್ ಟು ನೋ ಅಬೌಟ್ ಇಸ್ಲಾಂ.

ದಿ ಫ್ಯೂಚರ್ ಆಫ್ ಇಸ್ಲಾಂ, ಇಸ್ಲಾಮೋಫೋಬಿಯ: 21ನೇ ಶತಮಾನದಲ್ಲಿ ಬಹುತ್ವದ ಸವಾಲು ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.

ದಿ ಆಕ್ಸ್ಫರ್ಡ್ ಎನ್ ಸೈಕ್ಲೋಪಿಡಿಯ ಆಫ್ ದಿ ಮಾಡರ್ನ್ ಇಸ್ಲಾಮಿಕ್ ವರ್ಲ್ಡ್.

ದಿ ಆಕ್ಸ್ಫರ್ಡ್ ಹಿಸ್ಟರಿ ಆಫ್ ಇಸ್ಲಾಂ.

ದಿ ಆಕ್ಸ್ಫರ್ಡ್ ಡಿಕ್ಷನರಿ ಆಫ್ ಇಸ್ಲಾಂ.

ದಿ ಆಕ್ಸ್ಫರ್ಡ್ ಎನ್ ಸೈಕ್ಲೋಪಿಡಿಯ ಆಫ್ ವರ್ಲ್ಡ್ ಮತ್ತು ಆಕ್ಸ್ಫರ್ಡ್ ಇಸ್ಲಾಮಿಕ್ ಸ್ಟಡೀಸ್ ಆನ್ಲೈನ್ ಸೇರಿದಂತೆ ಆಕ್ಸ್ಫರ್ಡ್ ಹಲವಾರು ಪ್ರಮುಖ ಉಲ್ಲೇಖ ಕೃತಿಗಳ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕ್ಯಾತೋಲಿಕ್ ಆಗಿದ್ರು ಅವರು ಇಸ್ಲಾಂ ಧರ್ಮದ ವಸ್ತುನಿಷ್ಠ ಮತ್ತು ಸಮತೋಲಿತ ಅಧ್ಯಯನಗಳ ಮೂಲಕ ಮುಸ್ಲಿಂ ಪ್ರಪಂಚದ ವಿಶ್ವಾಸ ಮತ್ತು ಗೌರವವನ್ನು ಗಳಿಸಿದ್ದಾರೆ. 1998ರ ಏಪ್ರಿಲ್ ನಲ್ಲಿ ನಡೆದ ಕೇರಳ ಜಮಾಅತೆ ಇಸ್ಲಾಮಿ ರಾಜ್ಯ ಸಮ್ಮೇಳನದಲ್ಲಿ ಇವರು ಭಾಗವಹಿಸಿದ್ದರು.