ಇರಾನಿನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ದಾಳಿ ಮಾಡಿದ ಅಮೆರಿಕ

0
362

ಸನ್ಮಾರ್ಗ ವಾರ್ತೆ

ಇರಾನ್ ನ ಅಹುವಾಜ್ ನಲ್ಲಿರುವ ಶಾಹಿದ್ ಭಾಘಾಯ್ ಆಸ್ಪತ್ರೆಯ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ ತೀವ್ರ ಹಾನಿಯಾಗಿದೆ. ಆಸ್ಪತ್ರೆ ಕಟ್ಟಡಕ್ಕೆ ಹಾನಿಯಾದ ನಂತರ ಕ್ಯಾನ್ಸರ್ ಮಕ್ಕಳು ಸೇರಿದಂತೆ ರೋಗಿಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ.. ಈ ದಾಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಟೀಕೆ ವ್ಯಕ್ತವಾಗಿದೆ.

ಅಮೆರಿಕದ ದಾಳಿ ಮುಗಿಯುವವರೆಗೂ ಹರ್ ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ದೃಢ ನಿಶ್ಚಯ ಹೊಂದಿದೆ. ಈ ಮಧ್ಯ ಇರಾನ್ ಕೂಡ ಅಮೆರಿಕಾದ ಮಿತ್ರ ರಾಷ್ಟ್ರಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ.

ಇರಾನಿನ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಏಳು ಸೈನಿಕರು ಸಾವನ್ನಪ್ಪಿದ್ದಾರೆ. ಈವರೆಗೆ 35 ಮಂದಿ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ.

ಇರಾನಿನ ಸೇನೆ ಬಹರೇನ್ ನಲ್ಲಿರುವ ಅಮೆರಿಕಾದ ಐದನೇ ಫ್ಲೀಟ್ ಮೇಲೆ ದಾಳಿ ನಡೆದಿದೆ.

ಈ ನಡುವೆ ಭಾರಿ ಪ್ರಮಾಣದಲ್ಲಿ ಸೌದಿ ಅರೇಬಿಯಾ ಮತ್ತು ಕುವೈಟ್ ಗೆ ಅಮೆರಿಕ ಶಸ್ತ್ರಾಸ್ತ್ರ ಮಾರಾಟಕ್ಕೆ ಮುಂದಾಗಿದೆ.