ತನ್ನ ಆತ್ಮೀಯ ಗೆಳೆಯನನ್ನು ಕಳಕೊಂಡ ಪ್ರಧಾನಿ ಮೋದಿ

0
461

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿಯವರು ತನ್ನ ವಿಶ್ವಾಸಾರ್ಹ ಮಿತ್ರನನ್ನು ಕಳಕೊಂಡಿದ್ದಾರೆ. 2013ರಲ್ಲಿ ಮೋದಿಯ ಉದಯಕ್ಕಿಂತಲೂ ಮೊದಲು ಅವರ ಜೊತೆಗೆ ನಿಂತವರು ಇದೇ ಧರ್ಮೇಂದ್ರ ಪ್ರಧಾನ್. 2013ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ಮುನ್ನಾದಿನ ಎಲ್ ಕೆ ಅಡ್ವಾಣಿ ಅವರು ಆಗಿನ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ 2014ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದರು. ಆದರೆ ಮರುದಿನ ಬೆಳಿಗ್ಗೆ ಸಭೆ ಬೇರೊಂದಕ್ಕೆ ಸಾಕ್ಷಿ ಆಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿ, ಧರ್ಮೇಂದ್ರ ಪ್ರಧಾನ್ ಸಭೆಯ ಸ್ಥಳದಿಂದ ಹೊರ ನಡೆದರು. ಮೋದಿಯ ಉದ್ಘಾಟನೆಗೆ ಸಾರ್ವಜನಿಕವಾಗಿ ಬೆಂಬಲ ನೀಡಿದ ಮೊದಲ ಹಿರಿಯ ನಾಯಕರಾದರು.

ಅರುಣ್ ಜೇಟ್ಲಿ ಮತ್ತು ಜೆಪಿ ನಡ್ದ ಅವರೊಂದಿಗೆ ನರೇಂದ್ರ ಮೋದಿ ಅವರ ಉದಯದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಧರ್ಮೇಂದ್ರ ಪ್ರಧಾನ್ ಸೇರಿದ್ದಾರೆ.

ಮಾರ್ಚ್ 2009ರಲ್ಲಿ ಮೋಹನ್ ಭಾಗವತ್ ಆರ್ ಎಸ್ ಎಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನ್ ಅವರ ರಾಷ್ಟ್ರೀಯ ರಾಜಕೀಯದ ಉತ್ತುಂಗ ಪ್ರಾರಂಭವಾಯಿತು.

2012ರಲ್ಲಿ ಇವರು ರಾಜ್ಯಸಭೆಗೆ ಆಯ್ಕೆಯಾದ್ರು. ಎರಡು ವರ್ಷದ ನಂತರ ಮೋದಿ ಸರ್ಕಾರ ರಚನೆಯಾದ ಕೂಡಲೇ ಇವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿತು.

ಮುಂದಿನ ಏಳು ವರ್ಷಗಳಲ್ಲಿ ಪ್ರಧಾನ್ ಅವರು ಪೆಟ್ರೋಲಿಯಂ ನೈಸರ್ಗಿಕ ಅನಿಲ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯಗಳನ್ನು ನಿರ್ವಹಿಸಿದರು. 2021 ರಲ್ಲಿ ಶಿಕ್ಷಣ ಖಾತೆಯನ್ನು ವಹಿಸಿಕೊಂಡರು. ಬಿಹಾರ ಕರ್ನಾಟಕ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಗಳನ್ನು ನಿರ್ವಹಿಸುವುದನ್ನು ಮುಂದುವರಿಸಿದರು. ಪ್ರಧಾನ್ ಅವರು ಮೋದಿಯವರ ಅಡಿಯಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಶಿಕ್ಷಣ ಸಚಿವರಾದರು.

ಒಡಿಸ್ಸಾದಲ್ಲಿ ವಿದ್ಯಾರ್ಥಿ ನಾಯಕರಾಗಿ ಮತ್ತು ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟನೆಗಳು ಸೇರಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಆಂದೋಲನವನ್ನು ಮುನ್ನಡೆಸುವ ಮೂಲಕ ಅವರು ಹೆಸರುಗಳಿಸಿದರು.