ಜಿರಳೆಗಳು ಎಂದು ಸೂರ್ಯಕಾಂತ್ ಹೇಳದೇ ಇರುತ್ತಿದ್ದರೆ…

0
657

ಸನ್ಮಾರ್ಗ ವಾರ್ತೆ

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಅಭಿಜಿತ್ ದೀಪ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನೀವು ಜಿರಳೆಗಳು ಎಂದು ಕರೆಯದೆ ಇರ್ತಾ ಇದ್ರೆ ನಾನು ಭಾರತಕ್ಕೆ ಹಿಂತಿರುಗುತ್ತಿರಲಿಲ್ಲ ಅಥವಾ ದೇಶವನ್ನೇ ಬಿಚ್ಚಿಬಿಲಿಸುವ ಈ ಪ್ರತಿಭಟನೆಯನ್ನು ಪ್ರಾರಂಭಿಸುತ್ತಿರಲಿಲ್ಲ ಎಂದವರು ಹೇಳಿದ್ದಾರೆ.

ಹಿರಿಯ ವಕೀಲರ ಸ್ಥಾನಮಾನ ನೀಡುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇ 15ರಂದು ಪರಿಗಣಿಸುತ್ತಿದ್ದಾಗ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದರು. ಯಾವುದೇ ಉದ್ಯೋಗ ಸಿಗದ ಮತ್ತು ಕಾನೂನು ವೃತ್ತಿಯಲ್ಲಿ ಸ್ಥಾನವಿಲ್ಲದ ಜಿರಳೆಗಳಂತೆ ಅನೇಕ ಯುವಕರು ಇದ್ದಾರೆ ಎಂದು ಸೂರ್ಯಕಾಂತ ಸಮಯದಲ್ಲಿ ಹೇಳಿದ್ದರು.

ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಕಾಡಿಗೆಚ್ಚಿನಂತೆ ಹರಡಿತು ಮತ್ತು ದೇಶದ ಲಕ್ಷಾಂತರ ಜನರಲ್ಲಿ ಮತ್ತು ಯುವಕರಲ್ಲಿ ಅಪಾರ ಕೋಪ ಹಾಗೂ ಹತಾಶೆಯನ್ನು ಉಂಟು ಮಾಡಿತು. ಸೂರ್ಯಕಾಂತ್ ಅವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಅಸಂಖ್ಯ ಮಂದಿ ಪ್ರತಿಕ್ರಿಯಿಸಿದರು. ಇವರಲ್ಲಿ ಅಮೆರಿಕಾದ ಬೊಸ್ಟನ್ನಲ್ಲಿ ಓದುತ್ತಿರುವ ಅಭಿಜಿತ್ ದೀಪ್ಕೆ ಕೂಡ ಒಬ್ಬರು. ಇವರು ಈ ಹಿಂದೆ ಆಮ್ ಆದ್ಮಿ ಪಕ್ಷದ ಸಂವಹನ ತಂತ್ರಜ್ಞರಾಗಿ ಕೆಲಸ ಮಾಡಿದ್ದರು ಮೇ16ರಂದು ಇವರು ಕಾಕ್ರೋಚ್ ಜನತಾ ಪಾರ್ಟಿ ಎಂಬ ವೇದಿಕೆಯ ರಚನೆಯನ್ನು ಘೋಷಿಸಿದರು.

ಕೇವಲ ಸಾಮಾಜಿಕ ಮಾಧ್ಯಮದ ಟ್ರೋಲ್ ಆಗಿರಬೇಕಿದ್ದ ಈ ಗುಂಪನ್ನು ನೀಟ್ ಪರೀಕ್ಷೆ ಸೋರಿಕೆ ಬೆಳಕಿಗೆ ಬಂದ ನಂತರ ದೀಪ್ಕೆ ಹೆಚ್ಚು ಗಂಭೀರ ಚಳುವಳಿಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. ಭಾಗವಾಗಿಯೇ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಇಳಿಯಿತು.

35 ದಿನಗಳ ಕಾಲ ನಡೆದ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.