ಉಮರ್ ಖಾಲಿದ್ ಪ್ಲಕಾರ್ಡ್: 240 ಪ್ರಶ್ನಾವಳಿ ತಯಾರಿಸಿದ ಗೋವಾ ಪೊಲೀಸರು

0
235

ಸನ್ಮಾರ್ಗ ವಾರ್ತೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಗೋವಾದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಪ್ರಶ್ನಿಸಲು 240 ಪ್ರಶ್ನೆಗಳನ್ನು ಹೊಂದಿರುವ ಬೃಹತ್ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದೆ. ಜುಲೈ 24ರಂದು ಮಾಫುಸಾದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಉಮರ್ ಖಾಲಿದ್ ಗೆ ಬೆಂಬಲ ವ್ಯಕ್ತಪಡಿಸಿದ ಇಬ್ಬರು ಕಾರ್ಯಕರ್ತರನ್ನು ಪ್ರಶ್ನಿಸುವದು ಪೊಲೀಸರ ಉದ್ದೇಶವಾಗಿದೆ.

ನೀವು ಉಮರ್ ಖಾಲಿದ್ ರನ್ನು ಬಿಡುಗಡೆಗೊಳಿಸಿ ಎಂಬ ಘೋಷಣೆ ಕೂಗಿದ್ದೀರಲ್ಲ ಹಾಗಿದ್ದಲ್ಲಿ ನೀವು ಅದನ್ನು ಎಷ್ಟು ಬಾರಿ ಪುನರಾವರ್ತಿಸಿದ್ದೀರಿ. ಇತರರು ಈ ಘೋಷಣೆಯನ್ನು ಕೂಗಿದ್ದಾರಾ? ಉಮರ್ ಖಾಲಿ ದ್ ರನ್ನು ಬಿಡುಗಡೆಗೊಳಿಸಿ ಎಂಬ ಪದದ ಅರ್ಥವೇನು ಎಂಬುದು ಪ್ರಶ್ನೆಾವಳಿಯಲ್ಲಿ ಸೇರಿದೆ.

ಸಿಟಿಜನ್ಸ್ ಆಫ್ ಮಾಪುಸಾ ಎಂಬ ಸ್ಥಳೀಯ ಸಂಘಟನೆಯು ಸಲ್ಲಿಸಿದ ದೂರಿನ ಮೇರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಈ ಪ್ರಶ್ನಾವಳಿಯನ್ನು ಭರ್ತಿ ಮಾಡಲು ಕೇಳಲಾಗಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದವರು ಯಾರು, ಬ್ಯಾನರ್ಗಳು ಮತ್ತು ಫಲಕಗಳಿಗೆ ಯಾರು ಹಣ ಪಾವತಿಸಿದ್ದಾರೆ, ಅವರು ಯಾವುದೇ ವಾಟ್ಸಪ್ ಅಥವಾ ಟೆಲಿಗ್ರಾಂ ಗುಂಪುಗಳ ಸದಸ್ಯರೇ, ಪರೀಕ್ಷೆಗೆ ತಮ್ಮ ಫೋನ್ ಗಳನ್ನು ನೀಡಲು ಸಿದ್ದರಿದ್ದಾರೆಯೇ ಎಂದು ಪೊಲೀಸರು ಪ್ರಶ್ನಾವಳಿಯಲ್ಲಿ ಕೇಳಿದ್ದಾರೆ.

ಈ ನಡುವೆ ಉಮರ್ ಖಾಲಿದ್ ಬಿಡುಗಡೆಗೆ ಒತ್ತಾಯಿಸಿ, ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ಎತ್ತಲಾದ ಪ್ಲಕಾರ್ಡುಗಳು ಖಂಡನೀಯ ಮತ್ತು ರಾಷ್ಟ್ರ ವಿರೋಧಿ ಭಾವನೆಗಳನ್ನು ಹರಡುವವರನ್ನು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.