ಸನ್ಮಾರ್ಗ ವಾರ್ತೆ
2022ರ ರಾಮ ನವಮಿ ಮೆರವಣಿಗೆಗೆ ಸಂಬಂಧಿಸಿ ಕೋಮು ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದ 11 ಮುಸ್ಲಿಮರನ್ನು ಎಪಿಸಿಆರ್ ಕಾನೂನು ನೆರವು ನೀಡುವ ಮೂಲಕ ಬಿಡುಗಡೆಗೊಳಿಸಿದೆ. ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮಧ್ಯಪ್ರದೇಶದ ಬಾರ್ಗೊನ್ ನಲ್ಲಿ ಈ ಹಿಂಸಾಚಾರ ನಡೆದಿತ್ತು.
2022 ಏಪ್ರಿಲ್ ಹತ್ತರಂದು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮುಸ್ಲಿಮರ ಗುಂಪೊಂದು ಹಿಂದುಗಳ ಮನೆಗಳ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬುಗಳಿಂದ ದಾಳಿ ಮಾಡಿ ವಾಹನಗಳಿಗೆ ಹಾನಿ ಮಾಡಿದೆ ಎಂದು ಪ್ರಸಿಕ್ಯೂಷನ್ ಆರೋಪಿಸಿತ್ತು. ಆರೋಪಿಗಳ ವಿರುದ್ಧ ಗಲಭೆ ಬೆಂಕಿ ಹಚ್ಚುವುದು ಕ್ರಿಮಿನಲ್ ಪಿತೂರಿ ಮನೆ ಅತಿಕ್ರಮಣ ಮತ್ತು ಸ್ಪೋಟಕ ವಸ್ತುಗಳ ಕಾಯ್ದೆಯ ಅಪರಾಧಗಳನ್ನು ಹೊರಿಸಲಾಗಿತ್ತು.
ನ್ಯಾಯಾಲಯ 13 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿಚಾರಣೆ ನಡೆಸಿತು. ಹೆಚ್ಚಿನ ದೂರುದಾರರು ಸೇರಿದಂತೆ ಎಂಟು ಮಂದಿ ಪ್ರತಿಕೂಲ ಪ್ರತಿಕ್ರಿಯೆ ತೋರಿದರು. ನ್ಯಾಯಾಲಯದಲ್ಲಿ ಯಾವುದೇ ಆರೋಪಿಗಳನ್ನು ಸಾಕ್ಷಿಗಳು ಗುರುತಿಸಲು ವಿಫಲರಾದ್ರು.
ಪ್ರಕರಣವು ಒಬ್ಬ ಪ್ರತ್ಯಕ್ಷ ದರ್ಶಿಯ ಮೇಲೆ ನಿಂತಿತ್ತು. ಆದರೆ ಅವರ ಸಾಕ್ಷಿಯಲ್ಲಿ ವಿರೋಧಾಭಾಸಗಳಿದ್ದ ಕಾರಣ ನ್ಯಾಯಾಲಯ ಸಾಕ್ಷ್ಯವನ್ನು ವಿಶ್ವಾಸಾರ್ಹವಲ್ಲ ಎಂದು ಹೇಳಿತು. ಈ ಮೂಲಕ 11 ಮಂದಿ ಪ್ರಕರಣದಿಂದ ಬಿಡುಗಡೆಗೊಂಡರು.
ರೇಖಾ ಶ್ರೀವಾಸ್ತವ್ ಅವರನ್ನು ಎಪಿಸಿಆರ್ ವಕೀಲರಾಗಿ ನೇಮಿಸಿತ್ತು.












