19 ವರ್ಷಗಳ ಬಳಿಕ ಕೊಲ್ಕತ್ತಾಗೆ ಮರಳಿದ ತಸ್ಲೀಮ ನಸ್ರೀನ್

0
458

ಸನ್ಮಾರ್ಗ ವಾರ್ತೆ

ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರಿನ್ 19 ವರ್ಷಗಳ ನಂತರ ಕೊಲ್ಕತ್ತಾಗೆ ಮರಳಿದ್ದಾರೆ. ರವೀಂದ್ರ ಸದನದಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಹಿಂತಿರುಗಿದ್ದಾರೆ. ಬುದ್ಧ ದೇವ್ ಭಟ್ಟಾಚಾರ್ಯ ಅವರ ಈ ಹಿಂದಿನ ಎಡರಂಗ ಸರಕಾರ 2007ರಲ್ಲಿ ಅವರನ್ನು ಪಶ್ಚಿಮ ಬಂಗಾಳದಿಂದ ಹೊರ ಹೋಗುವಂತೆ ಮಾಡಿತ್ತು.

2007ರಲ್ಲಿ ಕೋಮು ಘರ್ಷಣೆಯನ್ನು ತಪ್ಪಿಸಲು ಮತ್ತು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಭಟ್ಟಾಚಾರ್ಯ ಅವರ ಸರ್ಕಾರ ತಸ್ಲೀಮ ಅವರನ್ನು ರಾಜ್ಯದಿಂದ ಹೊರಗೆ ಕಳಿಸುವ ನಿರ್ಧಾರ ತೆಗೆದುಕೊಂಡಿತು.

ಅವರ ದ್ವಿಖಂಡಿತ ಎಂಬ ಆತ್ಮ ಚರಿತ್ರೆಯಲ್ಲಿ ಇಸ್ಲಾಮನ್ನು ಮತ್ತು ಪ್ರವಾದಿಯನ್ನು ನಿಂದಿಸಿದ್ದಾರೆ ಎಂಬ ಆರೋಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಅವರ ವಿರುದ್ಧ ಪ್ರತಿಭಟನೆ ಕಾಣಿಸಿಕೊಂಡಿತು. ಪುಸ್ತಕ ಬಿಡುಗಡೆಯಾದ ನಂತರ ಕೊಲ್ಕತ್ತಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಬಳಿಕ ಪಶ್ಚಿಮ ಬಂಗಾಳ ಸರಕಾರವು ಪುಸ್ತಕವನ್ನು ನಿಷೇಧಿಸಿತು. 2007 ರಲ್ಲಿ ಕೊಲ್ಕತ್ತಾ ಹೈಕೋರ್ಟ್ ನಿಷೇಧವನ್ನು ತೆಗೆದು ಹಾಕಿತ್ತು ಮತ್ತು ಪುಸ್ತಕವನ್ನು ಮರುಪ್ರಸಾರ ಮಾಡಲಾಯಿತು.