ಸನ್ಮಾರ್ಗ ವಾರ್ತೆ
2024ರ ಹಲ್ದ್ವಾನಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ ಗೆ ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ , ಉತ್ತರಖಂಡ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮಾತ್ರ ಅಲ್ಲ ಕಠಿಣ ಪ್ರಶ್ನೆಗಳನ್ನು ಕೇಳಿದೆ. ಫೆಬ್ರವರಿ 2024ರಲ್ಲಿ ಹಲ್ದ್ವನಿಯಲ್ಲಿ ಮದರಸ ಮತ್ತು ಮಸೀದಿಯನ್ನು ಕೆಡವಿದ ನಂತರ ಇದು ಕಾನೂನುಬಾಹಿರ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿದ್ದುವು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆ ನಡೆದಿತ್ತು 5 ಮಂದಿ ಸಾವಿಗೀಡಾಗಿದ್ದರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನ್ಯಾಯಮೂರ್ತಿ ಜೋಯಿಮಲ್ಯ ಬಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನು ಒಳಗೊಂಡ ತ್ರಿ ಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿತು. ಏಪ್ರಿಲ್ 16 2026ರಂದು ಆರೋಪಿಗಳಿಗೆ ಜಾಮೀನು ನೀಡಿದ ಉತ್ತರಖಂಡ ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿತು.
2024ರಲ್ಲಿ ನಡೆದ ಘಟನೆಯಲ್ಲಿ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು ಮತ್ತು ಅಬ್ದುಲ್ ಮಲಿಕ್ ಅವರನ್ನು ಮಾಸ್ಟರ್ ಮೈಂಡ್ ಎಂದು ಪೊಲೀಸರು ಹೆಸರಿಸಿದ್ದರು . ಅವರ ವಿರುದ್ಧ ಯುಎಪಿಎ ಸೇರಿದಂತೆ ಕಠಿಣ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ತಿಂಗಳುಗಳ ಕಾನೂನು ಹೋರಾಟದ ನಂತರ ಅಬ್ದುಲ್ ಮಲಿಕ್ ಗೆ ಹೈಕೋರ್ಟು ಜಾಮೀನು ನೀಡಿತ್ತು. ರಾಜ್ಯ ಸರ್ಕಾರ ಈ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತು. ಪೊಲೀಸ್ ಠಾಣೆಯನ್ನು ಸುಟ್ಟುಹಾಕಿ ಸಂಘಟಿತ ಹಿಂಸಾಚಾರವನ್ನು ನಡೆಸಿದ ಆರೋಪಿಗೆ ಜಾಮೀನು ನೀಡುವುದು ಪೊಲೀಸ್ ಪಡೆಯ ಧೈರ್ಯವನ್ನು ಕುಗ್ಗಿಸುತ್ತದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರ ವಾದಿಸಿತು. ಆದರೆ ಪೊಲೀಸ್ ಠಾಣೆಯ ಮೇಲೆ ಪೆಟ್ರೋಲ್ ಬಾಂಬುಗಳನ್ನು ಎಸೆಯುವಂತಹ ಗುಂಪು ಹಿಂಸಾಚಾರಕ್ಕೆ ಯುಎಪಿಎ ಹೇಗೆ ಅನ್ವಯಿಸುತ್ತದೆ ಎಂದು ನ್ಯಾಯ ಮೂರ್ತಿ ಪ್ರಶ್ನಿಸಿದರು. ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಗಂಭೀರ ಭಯೋತ್ಪಾದನಾ ಕೃತ್ಯಗಳ ನಡುವೆ ದೊಡ್ಡ ಕಾನೂನು ವ್ಯತ್ಯಾಸ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಪ್ರಕರಣದ ವಿಚಾರಣಾ ಪ್ರಕ್ರಿಯೆಯಲ್ಲಿ ಸರ್ಕಾರ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಆರೋಪಿಸಿದೆ. ವಿಚಾರಣೆಯನ್ನುತ್ವರಿತಗೊಳಿಸುವ ಮತ್ತು ಅಪರಾಧವನ್ನು ಸಾಬೀತುಪಡಿಸುವ ಬದಲು ಜಾಮೀನು ಅರ್ಜಿಗಳನ್ನು ವಿರೋಧಿಸಲು ಸಮಯವನ್ನು ವ್ಯರ್ಥ ಮಾಡದಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.












