ಬಾಬರಿ ಮಸೀದಿ ಧ್ವಂಸ ಪ್ರಕರಣ: ಒಂಬತ್ತು ತಿಂಗಳೊಳಗೆ ತೀರ್ಪು ನೀಡಲು ವಿಶೇಷ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟು ಆದೇಶ

0
549

ಹೊಸದಿಲ್ಲಿ, ಜು.22: ಬಾಬರಿ ಮಸೀದಿ ಧ್ವಂಸಕ್ಕೆ ಕ್ರಿಮಿನಲ್ ಗೂಢತಂತ್ರ ಹೂಡಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆಯನ್ನು ಪೂರ್ತಿ ಮಾಡಲು ವಿಶೇಷ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟು ಸೂಚಿಸಿದೆ. ಪ್ರಕರಣದಲ್ಲಿ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಷಿ ಆರೋಪಿಗಳಾಗಿದ್ದಾರೆ. ಜಸ್ಟಿಸ್ ಆರ್. ಎಫ್ ನಾರಿಮನ್, ಸೂರ್ಯಕಾಂತ್‍ರ ಪೀಠ ಈ ಆದೇಶ ಹೊರಡಿಸಿದ್ದು, ತೀರ್ಪು ನೀಡುವ ವಿಶೇಷ ನ್ಯಾಯಾಧೀಶರು ಸೆಪ್ಟಂಬರ್ 30ಕ್ಕೆ ನಿವೃತ್ತರಾಗಲಿದ್ದು ನಾಲ್ಕು ವಾರಗಳ ಮೊದಲು ನ್ಯಾಯಾಧೀಶರ ಅವಧಿಯನ್ನು ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರಪ್ರದೇಶ ಸರಕಾರವನ್ನು ಸುಪ್ರೀಂಕೋರ್ಟು ಆಗ್ರಹಿಸಿದೆ.

ಪ್ರಕರಣದ ವಿಚಾರಣೆ ಮತ್ತು ತೀರ್ಪನ್ನು ನೀಡಲು ಸಮಯ ವಿಸ್ತರಿಸಿಕೊಡಬೇಕೆ೦ದು ವಿಚಾರಣಾ ಕೋರ್ಟಿನ ನ್ಯಾಯಾಧೀಶರು ಸುಪ್ರೀಂಕೋರ್ಟಿಗೆ ಈ ಹಿಂದೆಯೇ ಆಗ್ರಹಿಸಿದ್ದಾರೆ. ಸೆಪ್ಟಂಬರ್ 30ರಂದು ಅಧಿಕೃತ ಕಾಲಾವಧಿ ಒದಗಿಸಲು ನ್ಯಾಯಾಧೀಶರು ಮನವಿ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟು ಆದೇಶ ನೀಡಿದೆ. ಪ್ರಕರಣದ ತೀರ್ಪನ್ನು ನೀಡುವವರೆಗೆ ವಿಚಾರಣಾ ಕೋರ್ಟಿನ ನ್ಯಾಯಾಧೀಶರಿಗೆ ಸೇವೆಯಲ್ಲಿ ಮುಂದುವರಿಯಬಹುದು ಎಂದು ಸುಪ್ರೀಂಕೋರ್ಟು ಹೇಳಿದೆ.