ಅತೃಪ್ತ ಶಾಸಕರಿಗೆ ವಿಪ್ ಅನ್ವಯಿಸುತ್ತದೆ- ಸ್ಪೀಕರ್ ರಮೇಶ್ ಕುಮಾರ್

0
617

ಬೆಂಗಳೂರು, ಜು. 22: ವಿಶ್ವಾಸಮತ ಯಾಚನೆಯ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಮತ್ತು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಗೆ ಯಾವುದೇ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದ್ದು, ಪಕ್ಷದ ವಿಪ್ ಇವರಿಗೂ ಅನ್ವಯವಾಗುತ್ತದೆ ಎಂದು ಸ್ಪೀಕರ್ ರಮೇಶ್ ಸದನಕ್ಕೆ ತಿಳಿಸಿದ್ದಾರೆ. ಅತೃಪ್ತ ಶಾಸಕರ ಅರ್ಜಿಯನ್ನು ಕೋರ್ಟು ನಾಳೆ ಪರಿಗಣಿಸಲಿದೆ.

ಈ ಎಲ್ಲ ಬೆಳವಣಿಗೆಯ ನಂತರ ಹನ್ನೆರಡು ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ಕೆ ಆರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ. ನಾಳೆ ಹನ್ನೊಂದು ಗಂಟೆಯ ಮೊದಲು ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ಭಿನ್ನಮತೀಯ ಶಾಸಕರಿಗೆ ಸ್ಪೀಕರ್ ನೋಟಿಸು ನೀಡಿದ್ದಾರೆ. ಭಿನ್ನಮತೀಯ ಶಾಸಕರನ್ನು ಅತೃಪ್ತರಾಗಿಸುವ ಮೊದಲು ಸ್ಪೀಕರ್ ಕೈಗೊಂಡಿರುವ ಕ್ರಮ ಇದು.