ಸನ್ಮಾರ್ಗ ವಾರ್ತೆ
ದೆಹಲಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದ್ವೇಷ ಭಾಷಣ ಮಾಡಿದ್ದ ಆರೋಪದಲ್ಲಿ ಸಂಘ ಪರಿವಾರದ ಸಿದ್ಧಾಂತವಾದಿ ಮೋಹನ್ದಾಸ್ ಅವರನ್ನು ಬಂಧಿಸಲಾಗಿದೆ. ಆ ಬಳಿಕ ಅವರಿಗೆ ಜಾಮೀನು ಲಭ್ಯವಾಗಿದೆ. ಅವರ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಜಾಮೀನು ನೀಡಲಾಗುತ್ತಿದೆ ಎಂದು ತಿರುವನಂತಪುರಂ ನ್ಯಾಯಾಲಯ ತಿಳಿಸಿದೆ.
ಇದೇ ವೇಳೆ ಮೋಹನ್ ದಾಸ್ ಅವರ ದ್ವೇಷ ಭಾಷಣದ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದುಹಾಕಲು ಕೇರಳ ಸರ್ಕಾರ ಮೆಟಾಗೆ ಪತ್ರ ಬರೆದಿದೆ. ದೊಡ್ಡಮಟ್ಟದ ಟೀಕೆ ವ್ಯಕ್ತವಾದ ನಂತರ ಮೋಹನ್ದಾಸ್ ಅವರ ಬಂಧನವಾಗಿದೆ. ಪ್ರಕರಣ ದಾಖಲಾಗಿ 11ನೇ ದಿನ ಈ ಬಂಧನ ನಡೆದಿದೆ. ಅವರ ಮನೆಗೆ ತಲುಪಿದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ನಾನು ಜಂತರ್ ಮಂತರ್ ಪ್ರತಿಭಟನಾಕಾರರಲ್ಲಿ ಇದ್ದಿದ್ದರೆ ಅವರ ಮೇಲೆ ಗುಂಡು ಹಾರಿಸ್ತಾ ಇದ್ದೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು ಅತ್ಯಾಚಾರಿಗಳು ಎಂದು ಮೋಹನ್ದಾಸ್ ಈ ಹಿಂದೆ ಹೇಳಿದ್ದರು.












