ಸನ್ಮಾರ್ಗ ವಾರ್ತೆ
ಯುದ್ಧದ ಮೊದಲ ವಾರದಲ್ಲಿ ಇರಾನ್ನ ತ್ವರಿತ ಮಿಲಿಟರಿ ಜಮಾಾವಣೆಯಿಂದ ಇಸ್ರೇಲ್ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳು ಆಶ್ಚರ್ಯ ಚಕಿತರಾಗಿದ್ದರು ಎಂದು ವರದಿಯಾಗಿದೆ. ಜೆರುಸಲೇಮ್ ಪೋಸ್ಟ್ ಪ್ರಕಟಿಸಿದ ವರದಿಗಳ ಪ್ರಕಾರ ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ಮೊಸಾದ್ ನಂತಹ ಉನ್ನತ ಸಂಸ್ಥೆಗಳ ಅಧಿಕಾರಿಗಳು ಇರಾನ್ನ ಅನಿರೀಕ್ಷಿತ ಮರಳುವಿಕೆಯಿಂದ ಆಶ್ಚರ್ಯ ಚಕಿತರಾಗಿದ್ದರು ಎಂದು ವರದಿಯಾಗಿದೆ. ಇರಾನ್ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಅತಿ ವೇಗವಾಗಿ ಮರಳಿ ಪಡೆಯುವ ಮೂಲಕ ಇಸ್ರೇಲ್ಗೆ ಆಘಾತ ನೀಡಿರುವುದು ಇದೇ ಮೊದಲಲ್ಲ ಎಂದೂ ವರದಿ ಇದೆ.
ಇರಾನಿ 2024 ಅಕ್ಟೋಬರ್ ಮತ್ತು 2025 ಜನವರಿಯಲ್ಲಿ ಇಸ್ರೇಲ್ ಮೇಲೆ ಮರಳಿ ಸಂಘಟಿತ ದಾಳಿ ನಡೆಸಿತು. ಅಕ್ಟೋಬರ್ 2024ರಲ್ಲಿ ಇಸ್ರೇಲ್ ಸೇನೆಯು 20 ಪ್ರಮುಖ ಇರಾನಿನ ಬ್ಯಾಲೆಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ಕೈಗಾರಿಕಾ ಗುರಿಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತ್ತು. ಕ್ಷಿಪಣಿ ಉತ್ಪಾದನೆಯನ್ನು ಕನಿಷ್ಠ ಒಂದು ವರ್ಷ ಹಿಂದಕ್ಕೆ ತಳ್ಳಿದ್ದೇನೆ ಎಂದು ಹೇಳಿಕೊಂಡಿತ್ತು. ಆದರೆ 2025ರ ಹೊತ್ತಿಗೆ ಇರಾನ್ ಕ್ಷಿಪಣಿ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ಸೇನೆ ಆ ಬಳಿಕ ಅರಿತುಕೊಂಡಿತು.
2025 ರಲ್ಲಿ ಇರಾನ್ ಮೇಲೆ ದಾಳಿ ಮಾಡಿದ ಇಸ್ರೇಲ್ ಮತ್ತೆ ಒಂದು ಹೇಳಿಕೆ ನೀಡಿತು. ಇರಾನ್ ಹಲವಾರು ವರ್ಷಗಳ ಕಾಲ ಕ್ಷಿಪಣಿ ಉತ್ಪಾದನೆಯನ್ನು ವಿಳಂಬಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿತು. ಆದರೆ ಜೂನ್ 2025 ರಲ್ಲಿ ಕೇವಲ 1300 ಕ್ಷಿಪಣಿಗಳಿದ್ದ ಇರಾನ್ ನಲ್ಲಿ ಫೆಬ್ರವರಿ 2026ರ ಹೊತ್ತಿಗೆ ಅದು 2500 ಕ್ಕೆ ಏರಿತು. ಈ ಮೂಲಕ ಇಸ್ರೇಲ್ನ ಲೆಕ್ಕಾಚಾರವನ್ನು ಸಂಪೂರ್ಣ ತಲೆಕೆಳಗೂ ಮಾಡಿತು.
2026ರಲ್ಲಿ ಇಸ್ರೇಲ್ ಮತ್ತು ಅಮೆರಿಕ ಸೇರಿ ಇರಾನಿನ ಮೇಲೆ 30,000 ದಾಳಿಗಳನ್ನು ನಡೆಸಿದವು. ಆದರೆ ಇರಾನ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ನಾಶವಾದ ಭೂಗತ ಕ್ಷಿಪಣಿ ನಗರಗಳನ್ನು ಪುನಃ ಅಷ್ಟೇ ವೇಗವಾಗಿ ಸಕ್ರಿಯಗೊಳಿಸಿದೆ ಎಂದು ಈಗ ಗೊತ್ತಾಗಿದೆ. ಇಂತಹ ಉಪಗ್ರಹ ಚಿತ್ರಗಳನ್ನು ನ್ಯೂಯಾರ್ಕ್ ಟೈಮ್ಸ್ ಈ ಹಿಂದೆ ಪ್ರಕಟಿಸಿತ್ತು.












