ಸನ್ಮಾರ್ಗ ವಾರ್ತೆ
ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವ ಯಾವುದೇ ಆದೇಶವನ್ನು ಕ್ರಿಶ್ಚಿಯನ್ ಸಮುದಾಯ ಬಲವಾಗಿ ವಿರೋಧಿಸುತ್ತದೆ ಎಂದು ನಾಗಾಲ್ಯಾಂಡ್ ಚರ್ಚ್ ಕೌನ್ಸಿಲ್ ಹೇಳಿದೆ ದೇಶಭಕ್ತಿಯನ್ನು ಎಂದಿಗೂ ಬಲವಂತದ ವಿಧೇಯತೆಗೆ ಇಳಿಸಬಾರದು ಎಂದು ಕೌನ್ಸಿಲ್ ಹೇಳಿದೆ.
ಭಾರತದ ರಾಷ್ಟ್ರೀಯ ಚಿಹ್ನೆಗಳು ದೇಶಭಕ್ತಿಯ ಭಾವನೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಆದರೆ ಅದೇ ಸಮಯದಲ್ಲಿ ನಂಬಿಕೆ ಧಾರ್ಮಿಕ ಪ್ರಜ್ಞೆ ಆತ್ಮಸಾಕ್ಷಿ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅತ್ಯಂತ ಸೂಕ್ಷ್ಮತೆ ಮತ್ತು ಗೌರವದ ಅಗತ್ಯ ಇದೆ ಎಂದು ನಾಗಾಲ್ಯಾಂಡ್ ಬ್ಯಾಫ್ಟಿಸ್ಟ್ ಚರ್ಚ್ ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿ ರೆವೆರೆಂಡ್ ಡಾಕ್ಟರ್ ಮಾರ್ ಪೊಂಗೆನಾರ್ ಅವರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೇಶಭಕ್ತಿಯನ್ನು ಎಂದಿಗೂ ಕಡ್ಡಾಯ ವಿಧೇಯತೆಗೆ ಇಳಿಸಬಾರದು. ನಿರ್ದಿಷ್ಟ ದೇಶಭಕ್ತಿಯ ಅಭಿವ್ಯಕ್ತಿಗಳಲ್ಲಿ ಭಾಗವಹಿಸುವ ಮೂಲಕ ನಾಗರಿಕನ ದೇಶದ ಮೇಲಿನ ಪ್ರೀತಿಯನ್ನು ಅಳೆಯಲಾಗದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಚಿಹ್ನೆಗಳು ಮತ್ತು ಪದ್ಧತಿಗಳು ವಿಭಿನ್ನ ಸಮುದಾಯಗಳಿಗೆ ವಿಭಿನ್ನ ಅರ್ಥಗಳನ್ನು ಹೊಂದಿರುವ ಸಂದರ್ಭದಲ್ಲಿ ವಿವೇಕವನ್ನು ವಹಿಸುವಂತೆ ಅವರು ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ.












