ಚಂದ್ರಯಾನ-2 ಉಡ್ಡಯನ ಯಶಸ್ವಿ

0
528

ಶ್ರೀಹರಿಕೋಟಾ, ಜು.22: ಇಂದು ಮಧ್ಯಾಹ್ನ ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಚಂದ್ರಯಾನ -2 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದು ಎರಡನೆ ಚಂದ್ರಯಾನ ಉಡಾವಣೆಯಾಗಿದೆ. ಫ್ಯಾಟ್‍ಬಾಯ್ ಜಿಎಸ್ ಎಲ್ ವಿ -ಮಾರ್ಕ್ ತ್ರೀ(ಎಂ-1) ಬಾಹುಬಲಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕೊಂಡೊಯ್ದಿದೆ. ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನಿಲಯದಿಂದ ಮಧ್ಯಾಹ್ನ 2.43ಕ್ಕೆ ಉಡಾವಣೆಯಾಯಿತು. ಒಂದು ವಾರದ ನಿರೀಕ್ಷೆ ಮತ್ತು ಆತಂಕವೆಲ್ಲಕ್ಕೂ ಇತಿಶ್ರೀಯಾಗಿದೆ.