ಟೆಹ್ರಾನ್, ಜು. 23: ಹುರ್ಮುಸ್ ಸಮುದ್ರದಲ್ಲಿ ಇರಾನ್ ಸೆರೆ ಹಿಡಿದ ಸಟೆನ ಇಂಪೆರೊ ಹಡಗಿನ ದೃಶ್ಯಗಳು ಬಹಿರಂಗವಾಗಿದೆ. ಕೇರಳದ ವ್ಯಕ್ತಿಯ ಸಹಿತ ಹಡಗಿನ ಸಿಬ್ಬಂದಿಯ ದೃಶ್ಯಗಳನ್ನು ಇರಾನ್ ಹೊರಬಿಟ್ಟಿದೆ. ಇದೇ ವೇಳೆ, ತೈಲಹಡಗನ್ನು ಶೀಘ್ರ ಬಿಟ್ಟುಕೊಡಬೇಕೆಂದು ಬ್ರಿಟನ್ ಮತ್ತೆ ಆಗ್ರಹಿಸಿದೆ. ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ಪ್ರಧಾನಿ ತೆರೆಸಾ ಮೇಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ತುರ್ತು ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ. ಹಡಗು ಕಾನೂನಿಗೆ ವಿರುದ್ಧವಾಗಿ ಹಡಗನ್ನು ವಶಪಡಿಸಿಕೊಳ್ಳಲಾಗಿದೆ. ವಲಯದ ಸುರಕ್ಷೆಗೆ ಬೆದರಿಕೆಯಾದಾಗ ಈ ಕ್ರಮವನ್ನು ನಾವು ಜರಗಿಸಿದ್ದೇವೆ ಎಂದು ಇರಾನ್ ಸರಕಾರದ ವಕ್ತಾರ ಅಲಿ ರಾಬಿಈ ಹೇಳಿದರು.
ಅಂತಾರಾಷ್ಟ್ರೀಯ ನೌಕಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಡೆಯುವ ತನಿಖೆಯನ್ನು ಆಧಾರವಾಗಿಟ್ಟು ಹಡಗನ್ನು ಬಿಡುಗಡೆಗೊಳಿಸುವ ಕುರಿತು ಹೇಳಲು ಸಾಧ್ಯ ಎಂದು ರಾಬಿಈ ಹೇಳಿದರು. ವಶಪಡಿಸಿಕೊಂಡಿರುವ ಹಡಗಿನಲ್ಲಿ ಇರಾನ್ ತಮ್ಮ ಧ್ವಜ ಹಾರಿಸಿದ್ದಾರೆ. ಹಡಗಿನಲ್ಲಿ ಇರಾನ್ನ ಸೈನಿಕರು ಕೂಡ ಇದ್ದಾರೆ.












