ಪಕ್ಕಲಡ್ಕದಲ್ಲಿ ಸೀರತ್ ಸಮಾವೇಶ ಪ್ರವಾದಿ ಮುಹಮ್ಮದ್(ಸ) ಬದಲಾವಣೆಯ ಮಹಾನ್ ಮಾದರಿ: ಮೌಲಾನಾ ಯಹ್ಯಾ ತಂಙಳ್‌ ಮದನಿ

0
176

ಸನ್ಮಾರ್ಗ ವಾರ್ತೆ

ಪಕ್ಕಲಡ್ಕ: “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)” ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಪಕ್ಕಲಡ್ಕ ಸ್ನೇಹ ಸದನದಲ್ಲಿ “ಪ್ರವಾದಿ ಮುಹಮ್ಮದ್ (ಸ) – ಬದಲಾವಣೆಯ ಮಹಾನ್ ಮಾದರಿ” ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೌಲಾನಾ ಯಹ್ಯಾ ತಂಙಳ್‌ ಮದನಿ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ಅವರ ಜೀವನವು ಮಾನವ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸುವ ಮಹಾನ್ ಮಾದರಿಯಾಗಿದೆ ಎಂದು ಹೇಳಿದರು. ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಸುಧಾರಣೆಗೆ ಪ್ರವಾದಿ (ಸ) ಅವರ ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಅಧ್ಯಕ್ಷ ಅಬ್ದುಲ್ ಗಫೂರ್ ಕುಲಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಕ್ಕಲಡ್ಕ ವರ್ತುಲ ಸಂಚಾಲಕ ಸುಲೈಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಕ್ಕಲಡ್ಕ ಇಸ್ಲಾಮಿಯಾ ಮದ್ರಸದ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ದುಆ ಪುಸ್ತಕವನ್ನು ಮೌಲಾನಾ ಯಾಹ್ಯ ತಂಙಲ್ ಮದನಿ ಅವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಉಮರ್ ಹಾಫಿಝ್ ಅವರ ಕಿರಾಅತ್ ಪಡಿಸಿದರು. ಅಶೀರುದ್ದೀನ್ ಆಲಿಯಾ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನೂರುಲ್ ಅಮೀನ್ ವಂದಿಸಿದರು.