ಸನ್ಮಾರ್ಗ ವಾರ್ತೆ
ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು ಈ ಹಿನ್ನೆಲೆಯಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ಸಂಸ್ಥೆ ದೂರು ದಾಖಲಿಸಿದೆ. ಆ ಬಳಿಕ ಐದು ಮಂದಿ ಅರಣ್ಯ ಸಿಬ್ಬಂದಿ ನೌಕರರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಫರೀದ್ ಹಾಜಿ ಎಂಬವರನ್ನು ಅರಣ್ಯ ಅಧಿಕಾರಿಗಳು ತಡೆದಿದ್ದಾರೆ. ಅವರ ಹೆಸರು ಕೇಳಿದ್ದಾರೆ. ಅವರು ಮುಸ್ಲಿಂ ಎಂದು ತಿಳಿದ ಬಳಿಕ ಹಲ್ಲೆ ನಡೆಸಿದ್ದಾರೆ.
ಫರೀದ್ ಹಾಜಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಾಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಆದರೆ ಮೂರು ದಿನಗಳ ಕಾಲ ಎಫ್ಐಆರ್ ದಾಖಲಿಸದೆ ಪೊಲೀಸರು ಸತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ತೀರ ಕಳವಳಕಾರಿ ಎಂದು ಎಪಿಸಿಆರ್ ಹೇಳಿದೆ.
ಹಾಜಿಯವರ ಕುಟುಂಬಕ್ಕೆ ಕಾನೂನು ನೆರವು ನೀಡುವುದಾಗಿ ಎಪಿಸಿಆರ್ ಭರವಸೆ ನೀಡಿದೆ.












