ಯುದ್ಧ ಇರಾನಿನ ಆರ್ಥಿಕ ಸ್ಥಿತಿಯ ಮೇಲೆ ಭಾರಿ ಹೊಡೆತ ನೀಡಿದೆ : ಅಲ್ ಜಝೀರಾ

0
293

ಸನ್ಮಾರ್ಗ ವಾರ್ತೆ

ಇರಾನ್ ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧ ನಡೆದು ಆರು ತಿಂಗಳಾಗಿದ್ದು ದೇಶದ ಬಹುಪಾಲು ಜನರ ಜೀವನಮಟ್ಟ ಗಂಭೀರ ಬಿಕ್ಕಟ್ಟಿನಲ್ಲಿದೆ ಎಂದು ವರದಿ ತಿಳಿಸಿದೆ. ತೀವ್ರ ಆರ್ಥಿಕ ಕುಸಿತ ಮತ್ತು ಹಣದುಬ್ಬರದಿಂದಾಗಿ ಪ್ರತಿದಿನ 90 ಮಿಲಿಯನ್ ಜನರು ಬದುಕಲು ಹೆಣಗಾಡುತ್ತಿದ್ದಾರೆ ಎಂದು ಅಲ್ ಜಝಿರ ವರದಿ ಮಾಡಿದೆ.

ಯುದ್ಧ ಕೊನೆಗೊಳಿಸಬೇಕೆಂದು ಹೇಳುವವರು ಮತ್ತು ಅಮೆರಿಕದ ಜೊತೆ ಕೊನೆಯವರೆಗೂ ಹೋರಾಡಬೇಕು ಎಂದು ಹೇಳುವವರೂ ಆಡಳಿತದಲ್ಲಿ ಇದ್ದಾರೆ. ಆದರೆ ಆಡಳಿತವು ಅಮೆರಿಕ ಮತ್ತು ಇಸ್ರೇಲ್ ಗೆ ಶರಣಾಗದಿರಲು ಸರ್ವಾನುಮತದಿಂದ ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಬೇಕು ಎಂಬುದು ಟ್ರಂಪ್ ನಿಲುವು. ಇದೇ ವೇಳೆ ಈ ಜಲಸಂಧಿಯ ಮೂಲಕ ಹಡಗು ಸಾಗಣೆಯನ್ನು ಪುನರಾರಂಭಿಸಲು ಒಮಾನ್ ಜೊತೆ ಒಪ್ಪಂದಕ್ಕೆ ಬಂದಿರುವುದಾಗಿ ಇರಾನ್ ಹೇಳಿದೆ. ಈ ನಡುವೆ ಅಮೆರಿಕ ಇರಾನ್ ಮೇಲೆ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿದೆ.

ಈ ನಡುವೆ ಭ್ರಷ್ಟಾಚಾರ ಮತ್ತು ಅಮೆರಿಕಾದ ನಿರ್ಬಂಧದಿಂದಾಗಿ ಆಹಾರ ಬೆಲೆಗಳು ಶೇಕಡಾ 127ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ.

ಯುದ್ಧವು ತೈಲ ಮತ್ತು ಅನಿಲ ಸ್ತಾವರಗಳು ಉಕ್ಕಿನ ಗಿರಣಿಗಳು ಬಂದರುಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ಮೂಲಸೌಕರ್ಯಗಳನ್ನು ನಾಶಪಡಿಸಿದೆ. ಇದು ತೀವ್ರ ಇಂಧನ ಮತ್ತು ವಿದ್ಯುತ್ ಬಿಕಟ್ಟಿಗೆ ಕಾರಣವಾಗಿದೆ. ಸರ್ಕಾರವು ಖಾಸಗಿ ವಾಹನಗಳಿಗೆ ಇಂಧನ ಕೋಟವನ್ನು ಕಡಿತಗೊಳಿಸಿದೆ ಮತ್ತು ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ.