ಯುವತಿಯ ಹೊಟ್ಟೆಯಿಂದ ಒಂದೂವರೆ ಕಿಲೊ ಆಭರಣ, ನಾಣ್ಯಗಳನ್ನು ಹೊರತೆಗೆದ ವೈದ್ಯರು

0
552

ಕೋಲ್ಕತಾ, ಜು. 25: ಪಶ್ಚಿಮ ಬಂಗಾಳದ ಸರಕಾರಿ ಆಸ್ಪತ್ರೆಯಲ್ಲಿ ಯುವತಿಯೊಬ್ಬಳ ಹೊಟ್ಟೆಯಿಂದ ವೈದ್ಯರು ಶಸ್ತ್ರಕ್ರಿಯೆ ಮೂಲಕ ಒಂದೂವರೆ ಕಿಲೊ ಆಭರಣ ಮತ್ತು 90 ನಾಣ್ಯಗಳನ್ನು ಹೊರತೆಗೆದಿದ್ದಾರೆ. ಬಿರ್ಬಂ ಜಿಲ್ಲೆಯಲ್ಲಿ ಬುಧವಾರ ಮಹಿಳೆಯ ಹೊಟ್ಟೆಯ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಸರ, ಮೂಗುತಿ, ಕಿವಿಯೋಲೆ, ಬಳೆಗಳು, ಪಾದಸರ ಇತ್ಯಾದಿ ಆಭರಣಗಳ ಜೊತೆಗೆ ನಾಣ್ಯಗಳು ಕೂಡ ಇದ್ದವು. ಮಹಿಳೆಗೆ 26 ವರ್ಷ ಎಂದು ರಾಮ್‍ಪುರಹಟ್ಟ್ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸರ್ಜನ್ ಸಿದ್ಧಾರ್ಥ್ ಬಿಸ್ವಾಸ್ ಹೇಳಿದರು. ಐದು, ಹತ್ತು ರೂಪಾಯಿಯ ನಾಣ್ಯಗಳನ್ನು ಮಹಿಳೆ ನುಂಗಿದ್ದರು. ಇಂತಹ 90 ನಾಣ್ಯಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ. ತಾಮ್ರ, ಬೆಳ್ಳಿ ಆಭರಣಗಳ ಜೊತೆ ಬೆಳ್ಳಿ ಆಭರಣಗಳು ಹೊಟ್ಟೆಯ ಗುಡಾಣದಲ್ಲಿತ್ತು.

ಮಗ್ರಾಂ ಎಂಬಲ್ಲಿನ ಯುವತಿ ಮಾನಸಿಕ ಅಸ್ವಸ್ಥೆ ಎಂದು ತಾಯಿ ಹೇಳಿದರು. ಇತ್ತೀಚೆಗೆ ಮನೆ ಮತ್ತು ನೆರೆ ಮನೆಯಿಂದ ಆಭರಣಗಳು ಕಾಣೆಯಾಗುತ್ತಿದ್ದವು. ಇದರ ಕುರಿತು ಕೇಳಿದಾಗ ಮಹಿಳೆ ಅಳುತ್ತಿದ್ದಳು. ನಂತರ ಯುವತಿಯನ್ನು ರಹಸ್ಯವಾಗಿ ನೋಡಿದ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮಹಿಳೆಯ ತಾಯಿ ತಿಳಿಸಿದರು.