ಸೌದಿ ಯುವಕನನ್ನು ಮಸ್ಚಿದುಲ್ ಅಕ್ಸಾದಿಂದ ಹೊರದಬ್ಬಿದ ಫೆಲಸ್ತೀನಿಯರು- ವೀಡಿಯೊ

0
850

ಜೆರುಸಲೇಂ, ಜು. 25: ಇಸ್ರೇಲಿನ ಆಹ್ವಾನ ಸ್ವೀಕರಿಸಿ ಮಸ್ಚಿದುಲ್ ಅಕ್ಸಾ ಮಸೀದಿಯನ್ನು ಸಂದಶಿಸಲು ಬಂದ ಸೌದಿ ಪ್ರಜೆಯೊಬ್ಬನನ್ನು ಫೆಲಸ್ತೀನಿಯರು ಹೊರಗಟ್ಟಿದ್ದಾರೆ. ಮುಹಮ್ಮದ್ ಸವೂದ್ ಎನ್ನುವ ಯುವಕನನ್ನು ಅತಿಕ್ರಮಿತ ಪೂರ್ವ ಜೆರುಸಲೇಮ್‍ನಲ್ಲಿರುವ ಅಕ್ಸಾ ಕಂಪೌಂಡಿನಿಂದ ಹೊರಹಾಕಿದ ಘಟನೆ ನಡೆದಿದೆ. ಈ ಯುವಕ ಇಸ್ರೇಲ್‍ನ ವಿದೇಶ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಆರು ಮಂದಿಯ ಅರಬ್ ಪ್ರತಿನಿಧಿಗಳ ತಂಡದ ಸದಸ್ಯನಾಗಿದ್ದ. ಸಂದರ್ಶಕ ತಂಡ ಸೋಮವಾರ ಅಕ್ಸಾಕ್ಕೆ ಬಂದಿತ್ತು. ನಂತರ ಅಲ್ಲಿದ್ದ ಫೆಲಸ್ತೀನಿಯರು ಕುರ್ಚಿ ಬಾಟ್ಲಿಗಳಿಂದ ಯುವನಿಗೆ ಎಸೆದು ಅಲ್ಲಿಂದ ಓಡಿಸಿದರು. ಯಹೂದಿಯ ಚಾಡಿಕೋರ ಎಂದು ಆತನನ್ನು ಗುಂಪು ಆರೋಪಿಸಿತ್ತು.

ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವಾಗುತ್ತಿದೆ. ಸೌದಿಯವನನ್ನು ಜರುಸಲೆಂನಿಂದ ತುಳಿದು ಹಾಕಲಾಯಿತು ಎನ್ನುವ ಹ್ಯಾಶ್ ಟಾಗ್ ಕೂಡ ವೀಡಿಯೊದಲ್ಲಿ ಪ್ರಚಾರವಾಗಿದೆ. ಸಣ್ಣ ಮಕ್ಕಳ ಸಹಿತ ಎಲ್ಲರೂ ಇವನ ವಿರುದ್ಧ ಆಕ್ರೋಶಗೊಂಡಿದ್ದರು. ಇಸ್ರೇಲ್ ರೇಡಿಯೊಕ್ಕೆ ನೀಡಿದ ಸಂದರ್ಶನದಲ್ಲಿ ಮುಹಮ್ಮದ್ ಸವೂದ್ ನಾನು ಇಸ್ರೇಲನ್ನು ಪ್ರೀತಿಸುತ್ತೇನೆ. ಇಸ್ರೇಲಿನ ಜನತೆ ನನ್ನ ಕುಟುಂಬದಂತೆ ಎಂದು ಹೇಳಿದ್ದ. ಈತ ಇಸ್ರೇಲ್ ಸರಕಾರ ಅರಬ್ ಪತ್ರಕರ್ತರಿಗೆ ಇಸ್ರೇಲ್ ಸಂದರ್ಶನಕ್ಕೆ ಅವಕಾಶ ನೀಡಿದ ತಂಡದ ಸದಸ್ಯನಾಗಿದ್ದಾನೆ.