ಚೆನ್ನೈ, ಜು. 25: ರಾಜೀವ್ಗಾಂಧಿ ಕೊಲೆ ಪ್ರಕರಣದ ಆರೋಪಿ ನಳಿನಿ ಹರಿಹರನ್ಗೆ ಒಂದು ತಿಂಗಳ ಪರೋಲ್ ದೊರಕಿದೆ. ಬ್ರಿಟನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಪುತ್ರಿ ಹರಿತ್ರಾಳ ಮದುವೆಗೆ ಸಿದ್ಧತೆ ನಡೆಸುವ ಸಲುವಾಗಿ ನಳಿನಿಗೆ ಪರೋಲ್ ನೀಡಲಾಗಿದೆ. ಅವರು ವೆಲ್ಲೂರ್ ಜೈಲಿನಿಂದ ಹೊರಬಂದಿದ್ದು ಅವರ ಪುತ್ರಿ ಮುಂದಿನವಾರ ಮದುವೆಗಾಗಿ ಚೆನ್ನೈಗೆ ಬರಲಿದ್ದಾರೆ. ಜುಲೈ ಐದರಂದು ಮದ್ರಾಸ್ ಹೈಕೋರ್ಟು ನಳಿನಿಗೆ ಪರೋಲ್ ನೀಡಿತ್ತು.
ಅರ್ಜಿಯಲ್ಲಿ ನಳಿನಿ ಸ್ವಯಂ ವಾದಿಸಿದ್ದು ತನ್ನ ಪುತ್ರಿಯ ಮದುವೆ ನಡೆಸುವ ಸಲುವಾಗಿ ಆರು ತಿಂಗಳ ಪರೋಲ್ ನೀಡಬೇಕೆಂದು ಕೋರಿಕೆಯಿಟ್ಟಿದ್ದಳು. ಆದರೆ ಕಠಿಣ ನಿಯಂತ್ರಣದಲ್ಲಿ ಒಂದು ತಿಂಗಳ ಪರೋಲ್ ಅನ್ನು ಕೋರ್ಟು ಅನುಮತಿಸಿದೆ. ಪರೋಲ್ನಲ್ಲಿ ವೆಲ್ಲೂರಿನಿಂದ ಎಲ್ಲಿಗೂ ಹೋಗಬಾರದು ಎಂಬ ಶರ್ತವನ್ನು ಕೂಡ ನ್ಯಾಯಾಲಯ ವಿಧಿಸಿದೆ. ಜೊತೆಗೆ ನಳಿನಿ ರಾಜಕೀಯ ನಾಯಕರನ್ನು ಕೂಡ ಭೇಟಿ ಮಾಡಬಾರದು. ಕಳೆದ 27 ವರ್ಷಗಳಿಂದ ನಳಿನಿ ವೆಲ್ಲೂರ್ ಸೆಂಟ್ರಲ್ ಜೈಲಿನಲ್ಲಿದ್ದಾರೆ. ತಂದೆಯ ಮರಣಾನಂತರ ಕಾರ್ಯಕ್ರಮಕ್ಕಾಗಿ ಅವರಿಗೆ ಒಂದು ದಿನದ ಪರೋಲನ್ನು ಈ ಹಿಂದೆ ನೀಡಲಾಗಿತ್ತು. ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಜೀವಾವಧಿ ಶಿಕ್ಷೆಗೊಳಗಾಗಿದ್ದಾಳೆ. ಇದೇ ಪ್ರಕರಣದಲ್ಲಿ ಪತಿ ಮುರುಗನ್ ಕೂಡ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ನಳಿನಿ ಸೆರೆಯಾದಾಗ ನಳಿನಿ ಗರ್ಭಿಣಿಯಾಗಿದ್ದಳು. ಜೈಲಿನಲ್ಲಿಯೇ ನಳಿನಿಗೆ ಹೆರಿಗೆಯಾಗಿತ್ತು.












