ಇರಾನಿನ ಹಡಗು ಬಿಟ್ಟುಕೊಟ್ಟರೆ ಬ್ರಿಟಿಶ್ ಹಡಗನ್ನೂ ಬಿಡುಗಡೆ ಮಾಡುತ್ತೇವೆ- ರೂಹಾನಿ

0
572

ಟೆಹ್ರಾನ್, ಜು.25: ಇರಾನ್ ಸೆರೆಹಿಡಿದಿರುವ ತೈಲ ಹಡಗನ್ನು ಬಿಟ್ಟುಕೊಡಲು ಸಿದ್ಧ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ಆದರೆ ಬ್ರಿಟನ್ ಸರಕಾರ ಅದರ ವಶದಲ್ಲಿರುವ ಇರಾನ್‍ನ ಹಡಗನ್ನು ಬಿಡುಗಡೆಗೊಳಿಸಬೇಕೆಂದು ಅವರು ಹೇಳಿದರು. ರೂಹಾನಿ ಪ್ರಸ್ತಾವಕ್ಕೆ ಹೊಸದಾಗಿ ಬ್ರಿಟನ್ ಅಧ್ಯಕ್ಷರಾಗಿ ಆಯ್ಕೆಯಾದ ಬೊರಿಸ್ ಜಾನ್ಸನ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ನೋಡಬೇಕಾಗಿದೆ. ಇರಾನ್, ಬ್ರಿಟನ್ ತಡೆಹಿಡಿದ ಎರಡೂ ಹಡಗುಗಳಲ್ಲಿ ಭಾರತೀಯರು ಇದ್ದಾರೆ. ಯಾವುದೇ ಯುರೊಪಿಯನ್ ದೇಶಗಳೊಂದಿಗೆ ಘರ್ಷಣೆ ನಾವು ತಯಾರಿಲ್ಲ ಎಂದು ರೂಹಾನಿ ಹೇಳಿದರು.

ಅಂತಾರಾಷ್ಟ್ರೀಯ ಶಿಷ್ಟಾಚಾರ ಪಾಲಿಸಿ ತಪ್ಪು ಕ್ರಮಗಳಿಂದ ಹಿಂದೆ ಸರಿದರೆ ಇರಾನ್ ಅದರಂತೆ ವರ್ತಿಸುತ್ತದೆ. ತಪ್ಪು ಕ್ರಮ ಅಂದರೆ ಬ್ರಿಟಿಷ್ ರಾಯಲ್ ನೇವಿ ಈ ತಿಂಗಳಲ್ಲಿ ಜಿಬ್ರಾಲ್ಟರ್ ಕಡಲು ಸಂಧಿಯಲ್ಲಿ ಇರಾನ್‍ನ ತೈಲ ಹಡಗನ್ನು ವಶಪಡಿಸಿಕೊಂಡಿರುವುದು ಎಂದು ರೂಹಾನಿ ತಿಳಿಸಿದರು. ಇದೇವೇಳೆ ವಲಯದ ಹಡಗು ಸಂಚಾರ ರಕ್ಷಣೆಗೆ ಯುರೋಪಿನ ನೇತೃತ್ವದಲ್ಲಿ ತಂಡವನ್ನು ರೂಪಿಸಲಾಗುವುದು ಎಂದು ಬ್ರಿಟನ್ ಘೋಷಿಸಿದೆ.