ಸನ್ಮಾರ್ಗ ವಾರ್ತೆ
ಅಮೆರಿಕದೊಂದಿಗೆ ಮತ್ತೊಂದು ಮಿಲಿಟರಿ ಮುಖಾಮುಖಿ ನಡೆದರೆ ಹಿಂದೆಂದೂ ಬಳಸದ ಹೊಸ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳನ್ನು ಹೊರ ತರುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.. ಈ ಹಿಂದೆ ಗುರಿಯಾಗಿರದ ಹೊಸ ಕೇಂದ್ರಗಳಿಗೆ ಹೋರಾಟವನ್ನು ವಿಸ್ತರಿಸಲಾಗುವುದು ಎಂದು ಇರಾನ್ ಬೆದರಿಕೆ ಹಾಕಿದೆ.
ಇರಾನ್ ದೀರ್ಘಾವಧಿಯ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸಂಘರ್ಷ ಉಲ್ಬಣ ಗೊಂಡರೆ ಅದರ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ತಂತ್ರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತದೆ ಎಂದು ಇರಾನ್ ಸೇನೆಯ ವಕ್ತಾರಾ ಹುಸೇನ್ ಮುಹಿಬಿ ಹೇಳಿದ್ದಾರೆ.
ಇದುವರೆಗೆ ಮುಟ್ಟದ ಹೊಸ ಕಾರ್ಯತಂತ್ರದ ಸ್ಥಳಗಳನ್ನು ಇನ್ನು ಮುಂದೆ ಇರಾನ್ ಗುರಿಯಾಗಿಸಿಕೊಳ್ಳಲಿದೆ. ವಿಶ್ವದ ಅತಿ ದೊಡ್ಡ ನೌಕಾಪಡೆಯನ್ನು ಹೊಂದಿದ್ದರೂ ಹರ್ಮುಜ್ ಜಲಸಂಧಿಯ ಕಾರ್ಯತಂತ್ರದ ಜಲಮಾರ್ಗದಲ್ಲಿ ಸಂಚಾರವನ್ನು ಪುನರ್ ಸ್ಥಾಪಿಸಲು ಅಮೆರಿಕಕ್ಕೆ ಸಾಧ್ಯವಾಗಿಲ್ಲ ಮತ್ತು ಈ ಪ್ರದೇಶದಲ್ಲಿ ಅಮೆರಿಕ ಮತ್ತು ಇಸ್ರೇಲ್ ನ ಉದ್ದೇಶಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದವರು ಹೇಳಿದ್ದಾರೆ.












