ಸನ್ಮಾರ್ಗ ವಾರ್ತೆ
ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ಬೆಳಿಗ್ಗೆ ಉಡುಪಿ ಜಾಮಿಯಾ ಮಸೀದಿಯ ನೆಲ ಮಾಳಿಗೆಯಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷರಾದ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ದಾನಿಶ್ ಇವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು.

ಉಪಾಧ್ಯಕ್ಷರಾದ ನಿಸಾರ್ ಅಹ್ಮದ್ ಸ್ವಾಗತಿಸಿದರು. ನಿರ್ದೇಶಕರಾದ ರಯೀಸ್ ಅಹ್ಮದ್ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು. ನಿರ್ದೇಶಕ ಅನ್ವರ್ ಅಲಿ ಕಾಪು 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ದಾಖಲಿಸಿದರು.

ಕಾರ್ಯದರ್ಶಿ ಆರೀಫ್ ಕಾಶೀಮ್ ಸಾಹೇಬ್ 2025-26 ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕ ಮೊಹಮ್ಮದ್ ಇಕ್ಬಾಲ್ ಕಾಪು 2026-27 ರ ಸಾಲಿನ ಅಂದಾಜು ಆಯ-ವ್ಯಯ ಪತ್ರವನ್ನು ಮಂಡಿಸಿದರು. ನಿರ್ದೇಶಕ ಜಿ. ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದವಿತ್ತರು.












