SIR ಸಪ್ಟೆಂಬರ್ 23 ರ ಒಳಗೆ ಅರ್ಜಿ ಸಲ್ಲಿಸಿ : ಹೊಸ ನೋಂದಣಿ ವಿಳಂಬವಾದರೆ ಅಂತಿಮ ಮತದಾರರ ಪಟ್ಟಿಯಿಂದ ಹೊರಕ್ಕೆ

0
234

ಸನ್ಮಾರ್ಗ ವಾರ್ತೆ

ಬೆಂಗಳೂರು ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸೆಪ್ಟೆಂಬರ್ 23ರ ವರೆಗೆ ಅರ್ಜಿ ನಮೂನೆ 6 ಸಲ್ಲಿಸಿದರಷ್ಟೇ ಅಂತಿಮ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ

ರಾಜ್ಯದಲ್ಲಿ ಎಸ್ಐಆರ್ ಆರಂಭಿಸಿದಾಗ 5.54 ಕೋಟಿ ಮತದಾರರು ಇದ್ದರು. ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಪಟ್ಟ 4. 43. ಕೋಟಿ ಮತದಾರರಷ್ಟೇ ಸ್ಥಾನ ಪಡೆದಿದ್ದಾರೆ.1.08 ಮತದಾರರನ್ನು ಎ ಎಸ್ ಡಿ ಡಿ ಓ ಹೆಸರಲ್ಲಿ ಕರಡು ಪಟ್ಟಿಯಿಂದ ಹೊರಗೆ ಇಡಲಾಗಿದೆ. ಎಸ್ ಡಿ ಡಿ ಓ ಪಟ್ಟಿಯಲ್ಲಿರುವ 1.08 ಕೋಟಿ ಮತದಾರರಲ್ಲಿ “ಶಾಶ್ವತ ಸ್ಥಳಾಂತರ ” ಎಂದು ವರ್ಗೀಕರಿಸಲಾದ ಮತದಾರರ ಸಂಖ್ಯೆಯೇ 65 ಲಕ್ಷದಷ್ಟಿದೆ, ಈ ಎಲ್ಲರೂ ಎಸ್ಐಆರ್ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಕೊಳ್ಳಲು ಹೊಸದಾಗಿ ನೊಂದಣಿ ಮಾಡಿಸಬೇಕು, ಇದಕ್ಕಾಗಿ ಅರ್ಜಿ ನಮೂನೆ 6 ಸಲ್ಲಿಸಬೇಕು, “ಇದೇ ಸೆಪ್ಟೆಂಬರ್ 23ರ ಒಳಗೆ ಅರ್ಜಿ ಸಲ್ಲಿಸದಿದ್ದರೆ, ಅವರು ಎಸ್ಐಆರ್ ನಿಂದ ಸಂಪೂರ್ಣ ಹೊರಗೆ ಉಳಿಯಲಿದ್ದಾರೆ, ಈವರೆಗೆ 6.42 ಲಕ್ಷ ಮತದಾರರಷ್ಟೇ ಅರ್ಜಿ ನಮೂನೆ 6 ಸಲ್ಲಿಸಿದ್ದಾರೆ. ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಅಧಿಕಾರಿಯೊಬ್ಬರು ತಿಳಿಸಿದರು,

10.24 ಲಕ್ಷ ಮತದಾರರು, ವಿವರ ತಿದ್ದುಪಡಿ ಮತ್ತು ಬದಲಾವಣೆಗೆಂದು ಅರ್ಜಿ ನಮೂನೆ 8 ರಲ್ಲಿ ಸಲ್ಲಿಸಿದ್ದಾರೆ, ಇವರಲ್ಲಿ ವಿಳಾಸ ಬದಲಾವಣೆಯ ಕೋರಿಕೆಗಳೇ ಹೆಚ್ಚು. ಇವರು ಕರಡು ಮತದಾರ ಪಟ್ಟಿಯಲ್ಲಿ ಇಲ್ಲದೆ ಇರುವ ಕಾರಣಕ್ಕೆ,ಇವರ ವಿಳಾಸವನ್ನು ಅಪ್ಡೇಟ್ ಮಾಡಲಾಗದು, ಹೀಗಾಗಿ ಅವರು ಹೊಸ ಮತದಾರರಾಗಿಯೇ ನೋಂದಣಿ ಮಾಡಿಸಬೇಕು, ಕರಡು ಪಟ್ಟಿಯಲ್ಲಿದ್ದವರು ಅರ್ಜಿ ಸಲ್ಲಿಸಿದ್ದರೆ, ಅವರ ವಿವರಗಳನ್ನು ಅಪ್ಡೇಟ್ ಮಾಡಲಾಗುತ್ತದೆ, ಎಂದು ಮಾಹಿತಿ ನೀಡಿದರು, “ಮತದಾರರು ತಾವು ಕರಡು ಪಟ್ಟಿಯಲ್ಲಿ ಇದ್ದೇವೆಯೇ ಎಂಬುದನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು, ಕರಡು ಪಟ್ಟಿಯಲ್ಲಿ ಇಲ್ಲದಿದ್ದರೆ ASDDOಪಟ್ಟಿಯಲ್ಲಿ ಅವರ ಹೆಸರು ಇರುತ್ತದೆ, ಅದನ್ನು ಖಚಿತಪಡಿಸಿಕೊಂಡು, ಶೀಘ್ರವೇ ಅರ್ಜಿ ನಮೂನೆ 6 ಸಲ್ಲಿಸಬೇಕು, ಸೆಪ್ಟೆಂಬರ್ 23ರ ನಂತರ ಅರ್ಜಿ ಸಲ್ಲಿಸಿದವರನ್ನು ಮುಂದೆ ನಡೆಯಲಿರುವ ಸಾಮಾನ್ಯ ಪರಿಷ್ಕರಣೆಯಲ್ಲಿ ಮತದಾರರಾಗಿ ಸೇರಿಸಲಾಗುತ್ತದೆ, ಆದರೆ ಈಗ ಎಸ್ ಐ ಆರ್ ನಿಂದ ಅವರು ಸಂಪೂರ್ಣವಾಗಿ ಹೊರಗೆ ಉಳಿಯುತ್ತಾರೆ” ಎಂದರು.

17.63 ಲಕ್ಷ ನೋಟಿಸ್ ಗಳ ವಿಲೇವಾರಿ( ಕರಡು ಮತದಾರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮ್ಯಾಪಿಂಗ್ ಇಲ್ಲದ ಮತ್ತು ವಿವರ ವ್ಯತ್ಯಾಸವಿರುವ 43.81 ಲಕ್ಷ ಮತದಾರರ ಪೈಕಿ ಈವರೆಗೆ 34,96 ಲಕ್ಷ ಮಂದಿಗೆ ನೋಟಿಸ್ ನೀಡಲಾಗಿದೆ, ಈ ಪೈಕಿ ಈಗಾಗಲೇ 17.63 ಲಕ್ಷ ಮತದಾರರ ವಿಚಾರಣೆ ನಡೆಸಿ ನೋಟಿಸ್ ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯ ಪ್ರಕಟಣೆ ತಿಳಿಸಿದೆ.

43.81 ಲಕ್ಷ ನೋಟಿಸ್ ಗಳನ್ನು ಸೃಜಿಸಿದ್ದು. ಇನ್ನು 8.85 ಲಕ್ಷ ಮತದಾರರಿಗಷ್ಟೇ, *ಹಾಸನ *ಬೆಂಗಳೂರು ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನೋಟಿಸ್ ವಿತರಿಸಲಾಗಿದೆ* ಇನ್ನೂ 23 ಜಿಲ್ಲೆಗಳು ನೋಟಿಸ್ ವಿತರಣೆಯಲ್ಲಿ ಶೇಕಡ 90ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಿವೆ ಎಂದು ಮಾಹಿತಿ ನೀಡಿವೆ.

ಸೆಪ್ಟೆಂಬರ್ 23ರೊಳಗೆ ಅರ್ಜಿ ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದವರ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಅಗತ್ಯವೆನಿಸಿದರೆ ವಿಚಾರಣೆಗೆ ಕರೆದು ಖಚಿತ ಪಡಿಸಿ ಕೊಳ್ಳಲಾಗುತ್ತದೆ, ಅರ್ಹರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ.

( ವಿ ಅನ್ಬು ಕುಮಾರ್ ರಾಜ್ಯ ಮುಖ್ಯ ಚುನಾವಣಾಧಿಕಾರಿ)