ಇರಾನ್ ವಶಪಡಿಸಿದ ಹಡಗಿನಲ್ಲಿದ್ದ 9 ಭಾರತೀಯರ ಬಿಡುಗಡೆ

0
420

ಹೊಸದಿಲ್ಲಿ, ಟೆಹ್ರಾನ್, ಜು. 26: ಹುರ್ಮುಸ್ ಜಲಸಂಧಿಯಲ್ಲಿ ಇರಾನ್ ವಶಪಡಿಸಿಟ್ಟುಕೊಂಡಿರುವ ಹಡಗಿನಿಂದ ಒಂಬತ್ತು ಭಾರತೀಯರನ್ನು ಇರಾನ್ ಬಿಡುಗಡೆಗೊಳಿಸಿದೆ. ಜುಲೈಯ ಮೊದಲ ವಾರದಲ್ಲಿ ಇರಾನ್ ವಶಪಡಿಸಿಕೊಂಡ ಎಂಟಿರಿಯ ಹಡಗಿನ ಸಿಬ್ಬಂದಿಗಳು ಇವರು.

ಇರಾನ್ ತಡೆಹಿಡಿದಿರುವ ಇನ್ನೊಂದು ಬ್ರಿಟಿಶ್ ತೈಲ ಹಡಗು ವೆಸ್ಟರ್ನೊ ಎಪರೊಯಿಯಲ್ಲಿರುವವರ ಸಹಿತ ಒಟ್ಟು 21 ಭಾರತೀಯರು ಬಿಡುಗಡೆಗೆ ಕಾಯುತ್ತಿದ್ದಾರೆ. ವೆಸ್ಟರ್ನೊದಲ್ಲಿ ಇರಾನ್ ವಶದಲ್ಲಿರುವ ಹದಿನೆಂಟು ಭಾರತೀಯರೊಂದಿಗೆ ಭಾರತದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಬ್ರಿಟನ್ ವಶಪಡಿಸಿಟ್ಟುಕೊಂಡಿರುವ ಇರಾನ್‍ನ ತೈಲ ಹಡಗು ಗ್ರೇಸ್ ವನ್‍ನಲ್ಲಿ 24 ಭಾರತೀಯರಿದ್ದು ಅವರೂ ತಮ್ಮ ಬಿಡುಗಡೆಗೆ ಕಾದು ಕುಳಿತಿದ್ದಾರೆ. ಇವರೊಡನೆ ಲಂಡನ್‍ನ ಭಾರತದ ಧೂತವಾಸ ಅಧಿಕಾರಿಗಳು ಸಂಪರ್ಕದಲ್ಲಿದ್ದು ಬಿಡುಗಡೆಗೆ ಅಗತ್ಯವಾದ ಕ್ರಮದೊಂದಿಗೆ ಮುಂದುವರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.